ಮೈಸೂರು: ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂತು, ಮೋದಿ ಪ್ರಧಾನಿ ಆಗದಿದ್ದರೇ ನನಗೆ ಪ್ರಶಸ್ತಿ ಬರ್ತಿರಲಿಲ್ಲ ಎಂದು ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಎಸ್.ಎಲ್. ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಲೇಖಕ ಸತ್ತೇ ಸಾಯುತ್ತಾನೆ, ಆದ್ರೆ, ಅವನ ಪುಸ್ತಕ ಎಂದೂ ಜೀವಂತ ಅಂತ, ಮೋದಿಯವರಂತಹ ಪ್ರಧಾನ ಮಂತ್ರಿಗಳನ್ನು ನಾನು ಹಿಂದೆಂದೂ ನೋಡಿರಲಿಲ್ಲ, 2029ರವರೆಗೂ ಅವರೇ ಪ್ರಧಾನಿಯಾಗಿರಲಿ ಎಂದು ಮನಸಾರೆ ಹೊಗಳಿದ್ದಾರೆ.
12 ವರ್ಷ ನಾನು ಉತ್ತರ ಭಾರತದಲ್ಲಿದ್ದು ಬಂದೆ. ನನ್ನ ಅನೇಕ ಕಾದಂಬರಿಗಳು ಹುಟ್ಟಿದ್ದು ಇಲ್ಲೆ. ಎಷ್ಟೋ ಬರವಣಿಗೆಗಳಿಗೆ ಮೈಸೂರು ಸ್ಪೂರ್ತಿಯಾಗಿದೆ . ಮೈಸೂರು ಜನ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಸದಾ ಮೈಸೂರು ಜನರಿಗೆ ಋಣಿ ಅಂತ ಹೇಳಿದರು. ಎಷ್ಟು ದಿನ ಪುಸ್ತಕ ಇರುತ್ತೋ ಅಲ್ಲಿವರೆಗೆ ಲೇಖಕ ಸದಾ ಜೀವಂತ. ನನ್ನ ಬರೆದ ಕೃತಿಗಳಿಗೆ ಅಂತಹ ಶಕ್ತಿ ಇದ್ದರೆ ನನಗೆ ಸಂತೋಷ. ನನ್ನ ಕಾದಂಬರಿಗಳ ಮೂಲವೇ ಭಾರತದ ಸಂಸ್ಕೃತಿ ಎಂದರು.
ಕೇಂದ್ರ ಸರ್ಕಾರ 2023ನೇ ಸಾಲಿನ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ನಾಡಿನ ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಎಸ್.ಎಲ್. ಭೈರಪ್ಪ ಅವರಿಗೆ ಪದ್ಮಭೂಷಣ ಗೌರವ ಲಭಿಸಿದ್ದು, ಮೋದಿಯವರನ್ನು ಕೊಂಡಾಡಿದ್ದಾರೆ.