Tuesday, November 28, 2023
spot_img
- Advertisement -spot_img

ಬಿಜೆಪಿ ಶಾಸಕ ಮಾಡಾಳ್​​ ವಿರೂಪಾಕ್ಷಪ್ಪ ಅರೆಸ್ಟ್ ಆಗಬೇಕು, ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು : ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್​​ ವಿರೂಪಾಕ್ಷಪ್ಪರನ್ನು ಅರೆಸ್ಟ್ ಮಾಡಬೇಕು. ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಅಂದ್ರೆ ಭ್ರಷ್ಟ ಜನತಾ ಪಾರ್ಟಿ , ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ, ಮೋದಿ, ಅಮಿತ್ ಶಾ, ಕಟೀಲು, ಬೊಮ್ಮಾಯಿ ಬರೀ ಸುಳ್ಳು ಹೇಳ್ತಾರೆ. ನಾವು ಭ್ರಷ್ಟಾಚಾರ ಆರೋಪ ಮಾಡಿದ್ರೆ ದಾಖಲಾತಿ ಕೊಡಿ ಅಂತಾರೆ. ಅಲ್ಲದೇ ಹಿಂದಿನ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆದಿತ್ತು ಅಂತಾರೆ ಎಂದು ಕಿಡಿಕಾರಿದರು.

ಲೋಕಾಯುಕ್ತ ಪೊಲೀಸರು 8 ಕೋಟಿಗೂ ಹೆಚ್ಚು ಹಣ ಜಪ್ತಿ ಮಾಡಿದ್ದಾರೆ. ಬಿಜೆಪಿಯವರು ದುಡ್ಡಿನಿಂದ ಚುನಾವಣೆ ಗೆಲ್ತೀವಿ ಅಂದುಕೊಂಡಿದ್ದಾರೆ. ಪ್ರತಿ ಕ್ಷೇತ್ರಕ್ಕೆ 100 ಕೋಟಿಯಷ್ಟು ಖರ್ಚು ಮಾಡಲು ಹೊರಟಿದ್ದಾರೆ. ರಾಜ್ಯದ ಜನರೇ ಬಿಜೆಪಿಯವರಿಗೆ ಪಾಠ ಕಲಿಸಬೇಕು.

ನಾನು ಸಿಎಂ ಆಗಿದ್ದಾಗ ಆರೋಪ ಬಂದಾಗ ತನಿಖೆ ಮಾಡಿಸಿದ್ದೇನೆ ಎಂದರು. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ.

Related Articles

- Advertisement -spot_img

Latest Articles