Friday, September 29, 2023
spot_img
- Advertisement -spot_img

ಸೆ.1ಕ್ಕೆ I.N.D.I.A ಒಕ್ಕೂಟದ ಲೋಗೋ ರಿವೀಲ್!

ಮುಂಬೈ: ಬಿಜೆಪಿ ವಿರುದ್ಧ ಒಕ್ಕೂಟ ರಚಿಸಿರುವ ವಿಪಕ್ಷಗಳು I.N.D.I.A ಹೆಸರಲ್ಲಿ ಲೋಕಸಭೆ ಚುನಾವಣೆ ಎದುರಿಸಲು ತಯಾರಿ ನಡೆಸಿವೆ. ಈ ನಡುವೆ ಸೆಪ್ಟೆಂಬರ್ 1ರಂದು ಮೈತ್ರಿಕೂಟದ ಲಾಂಛನ ಬಿಡುಗಡೆ ಮಾಡಲಿವೆ ಎಂದು ತಿಳಿದುಬಂದಿದೆ.

ಆಗಸ್ಟ್‌ 31 ಹಾಗೂ ಸೆಪ್ಟೆಂಬರ್ 1ರಂದು ಖಾಸಗಿ ಹೋಟೆಲ್‌ನಲ್ಲಿ ಇಂಡಿಯಾ ಒಕ್ಕೂಟದ ಮೂರನೇ ಸಭೆ ನಿಗದಿಯಾಗಿದ್ದು, ಈ ವೇಳೆ ನೂತನ ಲಾಂಛನ ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ I.N.D.I.A ಒಕ್ಕೂಟದಲ್ಲಿ ಒಗ್ಗಟ್ಟಿನ ವಿಚಾರವಾಗಿ ಪ್ರಶ್ನೆಗಳು ಎದ್ದಿದ್ದು, ದೆಹಲಿಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಈ ಹಿನ್ನೆಲೆ ಬಿಜೆಪಿ ಮೈತ್ರಿಕೂಟದ ವಿರುದ್ಧ ವ್ಯಂಗ್ಯವಾಡಿದ್ದು, ಮದುವೆಗೂ ಮುನ್ನವೇ ತಲಾಖ್ ನೀಡಲಾಗ್ತಿದೆ ಎಂದಿದೆ.

ಇದನ್ನೂ ಓದಿ: ತೆಲಂಗಾಣಕ್ಕೆ ಅಮಿತ್‌ ಶಾ, ಖರ್ಗೆ; ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ

ಇತ್ತ ಆಪ್‌ ಸಹ ದೆಹಲಿಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವುದಾದರೆ ಮೈತ್ರಿ ಒಕ್ಕೂಟದ ಮುಂದಿನ ಸಭೆಯಲ್ಲಿ ಭಾಗಿಯಾಗುವುದರಿಂದ ಯಾವುದೇ ಲಾಭವಿಲ್ಲ ಎಂದಿದೆ. ಹೀಗಾಗಿ ಮೈತ್ರಿ ಒಕ್ಕೂಟದ ಮೂರನೇ ಸಭೆ ಕುರಿತು ಕುತೂಹಲ ಮೂಡಿಸಿದ್ದು, ಆ ಸಭೆಗೆ ಕೇಜ್ರಿವಾಲ್ ಗೈರಾಗಲಿದ್ದಾರಾ ಎಂಬ ಅನುಮಾನ ಮೂಡಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles