ಬೆಂಗಳೂರು : ‘ನಾನು ನನ್ನ ಗಮ್ಯ ಸ್ಥಾನ ತಲುಪಿದ್ದೇನೆ, ನೀವೂ (ಭಾರತ) ಕೂಡ’ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಟ್ವೀಟ್ ಮಾಡಿದೆ.
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಬುಧವಾರದ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಆದ ನಂತರ ಇಸ್ರೋ ಮೊದಲ ಪ್ರತಿಕ್ರಿಯೆ ನೀಡಿದೆ. ಚಂದ್ರಯಾನ-3ರ ಮೂಲಕ ಕೇವಲ ಮಿಷನ್ ಮಾತ್ರವಲ್ಲ, ಇಡೀ ದೇಶ ಚಂದ್ರನ ಬಳಿಗೆ ತಲುಪಿದೆ ಎಂದು ಇಸ್ರೋ ಹೇಳಿದೆ.
ಚಂದ್ರಯಾನ -3ರ ಲ್ಯಾಂಡರ್ ಮಾಡ್ಯೂಲ್ ಲ್ಯಾಂಡರ್ (ವಿಕ್ರಮ್) ಮತ್ತು ರೋವರ್ (ಪ್ರಜ್ಞಾನ್) ಅನ್ನು ಒಳಗೊಂಡಿರುವ ಮಿಷನ್ ಅನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. ಇದು ಬುಧವಾರ ಸಂಜೆ 5:45 ಕ್ಕೆ ಚಂದ್ರನ ಮೇಲ್ಮೈಗೆ ತನ್ನ ಅಂತಿಮ ಇಳಿಯುವಿಕೆಯನ್ನು ಪ್ರಾರಂಭಿಸಿತು. ಸಂಜೆ 6:04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿದೆ.
ಇದನ್ನೂ ಓದಿ : ಚಂದ್ರನ ಬಳಿಕ ‘ಸೂರ್ಯನತ್ತ’ ಇಸ್ರೋ ಚಿತ್ತ : ಶೀಘ್ರದಲ್ಲೇ ಮಿಷನ್ ಆದಿತ್ಯ ಎಲ್-1 ನಭಕ್ಕೆ
ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾಗಿ ಭಾರತ ಹೊರ ಹೊಮ್ಮಿದೆ. ಚಂದ್ರನ ಮೇಲೆ ಮೂರ್ನಾಲ್ಕು ದೇಶಗಳು ತಲುಪಿದ್ದರೂ, ದಕ್ಷಿಣ ಧ್ರುವದಲ್ಲಿ ರೋವರ್ ಇಳಿಸುವ ಸಾಹಸ ಯಾರೂ ಮಾಡಿರಲಿಲ್ಲ. ಭಾರತ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಧ್ರುವದಲ್ಲಿ ರೋವರ್ ಇಳಿಸಿ ಜಾಗತಿಕ ಬಾಹ್ಯಾಕಾಶ ವಿಜ್ಞಾನದಲ್ಲಿ ನವ ಇತಿಹಾಸ ಬರೆದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.