Monday, December 4, 2023
spot_img
- Advertisement -spot_img

ಜೀವನದ ಕೊನೆವರೆಗೂ ಡಿ.ಕೆ. ಶಿವಕುಮಾರ್ ಜೊತೆ ಇರ್ತೇನೆ: ಕಬಡ್ಡಿ ಬಾಬು

ಬೆಂಗಳೂರು: ನನ್ನ ಜೀವನದ ಕೊನೆಯವರೆಗೂ ಡಿ.ಕೆ. ಶಿವಕುಮಾರ್ ಜೊತೆ ಇರ್ತೇನೆ ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಹೆಚ್.ಡಿ. ಕುಮಾರಸ್ವಾಮಿ ಆಪ್ತ ಕಬಡ್ಡಿ ಬಾಬು ಹೇಳಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ನಂತರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ‘ಹಲವು ಬಾರಿ ಕಾಂಗ್ರೆಸ್ ಸೇರುವ ಮಾತುಕತೆ ನಡೆದಿತ್ತು. 2003ರಲ್ಲಿ ಬೋರ್ಡ್‌ ಒಂದಕ್ಕೆ ಅಧ್ಯಕ್ಷ ಮಾಡ್ತಿನಿ ಅಂದಿದ್ರು. ಆದರೆ, ಕಾಂಗ್ರೆಸ್ ಸೇರುವುದಕ್ಕೆ ಆಗಲಿಲ್ಲ. ಮತ್ತೊಮ್ಮೆ ಎಂಎಲ್‌ಸಿ ಮಾಡ್ತೀನಿ ಅಂದ್ರು. ಆಗಲೂ ನನ್ನ ಹಣೆಬರಹ ಬರಕ್ಕೆ ಆಗಲಿಲ್ಲ. ಏನೋ ಮಾತನಾಡಲು ಡಿ.ಕೆ. ಶಿವಕುಮಾರ್ ಮನೆಗೆ ಹೋದಾಗ ಕಾಂಗ್ರೆಸ್ ಸೇರುವ ವಿಚಾರ ಪ್ರಸ್ತಾಪ ಆಗಿದೆ. ರಾಜಕಾರಣದಲ್ಲಿ ನನಗೆ ಸಾಕಷ್ಟು ಅನುಭವ ಇದೆ, ನಮ್ಮನ್ನೆಲ್ಲಾ ಗುರುತಿಸಿ ಕರೆತಂದಿದ್ದಾರೆ’ ಎಂದರು.

ಇದನ್ನೂ ಓದಿ; ಅಶೋಕ್, ಹೆಚ್‌ಡಿಕೆ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿದ ಡಿಕೆಶಿ

‘ನನ್ನ ಮಗ ಪವನ್ ಸಹ ಕಾಂಗ್ರೆಸ್ ಸೇರಿಕೊಂಡಿದ್ದಾನೆ, ಮುಂದಕ್ಕೆ ಇನ್ನೂ ಇದೆ. ಬಹಳಷ್ಟು ಜನ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಡಿ.ಕೆ. ಸುರೇಶ್ ಬಂದು ಪಕ್ಷಕ್ಕೆ ಆಹ್ವಾನಿಸಿದ್ದರು. ಕಾಂಗ್ರೆಸ್ ಪಕ್ಷ ವನ್ನು ನಾವು ಬಲಪಡಿಸುತ್ತಿದ್ದೇವೆ. ಜೀವನದ ಕೊನೆವರೆಗೆ ಡಿ.ಕೆ. ಶಿವಕುಮಾರ್ ಜೊತೆ ಇರ್ತೇನೆ. ಕಬಡ್ಡಿಆಟದಲ್ಲಿ ನಾನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗೋಲ್ಡ್ ಮೆಡಲ್ ತಂದಿದ್ದೇನೆ’ ಎಂದರು.

‘ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ಯೋಜನೆ ಜಾರಿಗೆ ತಂದಿದ್ದಾರೆ. ಅನುಮತಿ ಕೊಟ್ಟರೆ ಕೇಬಲ್ ಇಂಡಸ್ಟ್ರಿ, ಗ್ಯಾಸ್, ಹಾಲು ಹಾಕುವ ಎಲ್ಲರೂ ತೀರ್ಮಾನ ಮಾಡಿ ಕಾಂಗ್ರೆಸ್ ಸೇರುವುದಾಗಿ ತಿಳಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಸೇರ್ಪಡೆ ಮಾಡುತ್ತೇವೆ. ರಾಜಕೀಯ ಬೇಡ ಎಂದುಕೊಂಡಿದ್ದೆ. ಆದರೆ, ಮತ್ತೆ ನಮಗೆ ರಾಜಕೀಯ ಜೀವನ ಕಲ್ಪಿಸಿಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ’ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles