ಉಡುಪಿ : ಲೋಕಸಭಾ ಚುನಾವಣೆ ಎದುರಿಸಲು, ಬಿಜೆಪಿ ಜೆಡಿಎಸ್ ಮೈತ್ರಿಯಾದರೆ ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಸಿದ್ಧಾಂತಕ್ಕೂ ಜನರ ಭಾವನೆಗಳಿಗೂ ಬಹಳ ವ್ಯತ್ಯಾಸವಿದೆ : ಸಿದ್ದುಗೆ ಕುಟುಕಿದ ದಳಪತಿ
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂದಿಸಿದಂತೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ”ಮಾಧ್ಯಮಗಳಲ್ಲಿ ಬಿಜೆಪಿ-ಜೆಡಿಎಸ್ ವಿಚಾರ ಚರ್ಚೆಯ ಕುರಿತು ನಾನು ನೋಡಿದ್ದೇನೆ. 150 ಕೋಟಿ ಜನಕ್ಕೆ ಮೋದಿ ಬೇಕು. ಆದರಿಂದ 2024ರ ಚುನಾವಣೆ ಬಿಜೆಪಿಗೆ ಬಹಳ ಮಹತ್ವದಾಗಿದೆ. ಮೋದಿಯವರು ಮತ್ತೆ ದೇಶದ ಪ್ರಧಾನಿಯಾಗುವುದು ಅವಶ್ಯವಿದೆ. ದೇಶವನ್ನು ಮುನ್ನಡೆಸುವ ಸಮರ್ಥ ನಾಯಕತ್ವ ಮೋದಿಯವರಿಗೆ ಮಾತ್ರ ಇದ್ದು, ದೇಶದ ರಕ್ಷಣೆ, ಆರ್ಥಿಕತೆ ಹಾಗೂ ಜನಸಾಮಾನ್ಯರ ಅಭಿವೃದ್ಧಿಗಾಗಿ ಮೋದಿಯವರು ಬೇಕು. ಆದರಿಂದ ಕಾಂಗ್ರೆಸ್ ಪಕ್ಷ ಎದುರಿಸಲು ಹಳೆ ಕಹಿ ಮರೆತು ಜೆಡಿಎಸ್ ನೊಂದಿಗೆ ಮೈತ್ರಿಯನ್ನು ನಾನು ಸ್ವಾಗತಿಸುತ್ತೇನೆ” ಎಂದರು.
ಇದನ್ನೂ ಓದಿ : ಮೈತ್ರಿ ಘೋಷಿಸಿ ಕೈ ತೊಳೆದುಕೊಂಡ್ರಾ ಬಿಎಸ್‌ವೈ?
ಮಾತು ಮುಂದುವರಿಸಿದ ಅವರು, ಹಳೆಯ ಹತ್ತಾರು ಸಂಗತಿಗಳು ನಮ್ಮ ಎರಡು ಪಕ್ಷಗಳ ನಡುವೆ ಇರಬಹುದು, ಆದರೆ 2024ರ ಗುರಿ ಮೋದಿಯನ್ನು ದೇಶದ ಪ್ರಧಾನಿ ಮಾಡೋದು, ಪೂರ್ಣಬಹುಮತದ ಬಿಜೆಪಿ ಸರ್ಕಾರ ನಮ್ಮ ಗುರಿ. ಕೇಂದ್ರದಲ್ಲಿ ಬಹುಮತ ಸಾಧಿಸುವುದರಿಂದ ಕರ್ನಾಟಕದಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿದೆ. ಜೆಡಿಎಸ್-ಬಿಜೆಪಿಯ ನಡುವೆ ಹಳೆಯ ಹತ್ತಾರು ವಿಷಯಗಳಿವೆ, ಆದರೆ ಮುಂದಿನ 2024ರ ಗುರಿ ದೊಡ್ಡದು ಇರೋದ್ರಿಂದ ಹಳೆಯ ವಿಚಾರಗಳನ್ನು ಮರೆತು 24ರ ಗುರಿಯನ್ನು ನೋಡಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ವಿಜಯೇಂದ್ರಗೆ ಒಲಿಯಲಿದೆಯಾ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?
ವಿಪಕ್ಷ ನಾಯಕತ್ವದ ಬಗ್ಗೆ ಮಾತನಾಡಿದ ಅವರು, ಬಿಜೆಪಿ 66 ಶಾಸಕರು ಇರುವಾಗ ಬಿಜೆಪಿ ಶಾಸಕರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಿ ಎಂದು ನಾನು ಹೇಳಿದ್ದೆ, ಆ ನಿಲುವಿಗೆ ನಾನು ಇಂದಿಗೂ ಬದ್ಧವಾಗಿದ್ದೇನೆ. ನಮ್ಮ 66 ಬಿಟ್ಟು ಬೇರೆಯವರನ್ನ ವಿಪಕ್ಷ ನಾಯಕ ಮಾಡಿದ್ರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದಿದ್ದೆ, ಆದರೆ ಇದರ ಬಗ್ಗೆ ನಮ್ಮ ನಾಯಕರು ಮನವರಿಕೆ ಮಾಡಿದಂತೆ ನಡೆಯುತ್ತೇವೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.