ಚಿಕ್ಕೋಡಿ : ಬಿಜೆಪಿ , ಜೆಡಿಎಸ್ ಮೈತ್ರಿ ಮಾಡುತ್ತಿದ್ದಾರೆ ಎಂದು ತಿಳಿದಿದೆ, ಅವರು ಮೈತ್ರಿ ಮಾಡಿಕೊಳ್ಳುವುದನ್ನು ಕಾಂಗ್ರೆಸ್‌ನಿಂದ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ಸಚಿವೆ ಹೆಬ್ಬಾಳಕರ್ ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಮಾಡಲಿ, ಅವರ ನಿರ್ಧಾರವನ್ನು ಸ್ವಾಗತಿಸ್ತೇನೆ , ಗೃಹಲಕ್ಷ್ಮಿ ಯೋಜನೆಯ ಹಲವು ಖಾತೆಗಳಿಗೆ ಹಣ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಯಾರು ಅರ್ಜಿ ಹಾಕಿದ್ದಾರೆ ಅವರಿಗೆ ಎಲ್ಲರಿಗೂ ಹಣ ಸಿಗುತ್ತದೆ, ಕೆಲವು ಖಾತೆಗಳ ತೊಂದರೆಯಿಂದ ಹಣ ಬರುತ್ತಿಲ್ಲ ಎಂದರು.
ಇದನ್ನೂ ಓದಿ : ಬಂದ್‌ಗೆ ಸೆಡ್ಡು ಹೊಡೆದ ಬಿಎಂಟಿಸಿ : ಹೆಚ್ಚುವರಿ ಬಸ್ ರಸ್ತೆಗಿಳಿಸಲು ನಿರ್ಧಾರ
ಸುಮಾರು ಎಂಟು ಲಕ್ಷ ಜನರ ಖಾತೆಗಳಿಗೆ ಹಣ ಹೋಗುತ್ತಿಲ್ಲ, ಅಂತಹವರನ್ನು ಗುರುತಿಸಿ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಹಣವನ್ನು ಫಲಾನುಭಾವಿ ಖಾತೆಗೆ ಹಣ ಬಿಡುಗಡೆ ಮಾಡಲಾಗುವುದು, ಮತ್ತು ಯಾರಿಗೂ ತೊಂದರೆಯಾಗದಂತೆ ಮುಂದೆ ಸರ್ಕಾರದಿಂದ ಸಹಾಯವಾಣಿ ಸಂಖ್ಯೆ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.