ರಾಮನಗರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಹಿಂದೂಗಳ ಹಿತದೃಷ್ಟಿಯಿಂದ ಸ್ಪರ್ಧೆ ಮಾಡುತ್ತಿದ್ದೇನೆಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪುರುಚ್ಛರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೇನೆ , ಬಿಜೆಪಿ ಒಂದೇ ಒಂದು ಹಿಂದೂ ಕಾರ್ಯಕರ್ತರ ರೌಡಿ ಶೀಟರ್ ರದ್ದು ಮಾಡಲಾಗಿಲ್ಲ. ಹಿಂದೆ ಕಾಂಗ್ರೆಸ್ ನವರು ರೌಡಿ ಶೀಟರ್ ಗೆ ಹೆಸರು ಸೇರಿಸಿದ್ರು. ಒಂದು ಗೋರಕ್ಷಣೆ ಮಾಡಿದವ್ರನ್ನೂ ರೌಡಿ ಶೀಟರ್ ಅಂದ್ರು ಎಂದು ವಾಗ್ದಾಳಿ ನಡೆಸಿದರು.
25 ಹಿಂದೂವಾದಿಗಳು ಈ ಬಾರಿ ಕಣಕ್ಕೆ ಇಳಿಯುತ್ತಿದ್ದೇವೆ. 25 ಸೀಟ್ ಗಳನ್ನು ಹಿಂದುತ್ವವಾದಿಗಳಿಗೆ ಕೊಡಬೇಕು ಅಂತ ಬಿಜೆಪಿ ಕೇಳಿಕೊಂಡಿದ್ದೇವೆ. ಆದರೆ ಅವರು ಕೊಟ್ಟಿಲ್ಲ. ಸ್ವತಂತ್ರವಾಗಿ ಹಿಂದೂವಾದಿಗಳು ಚುನಾವಣಾ ಕಣಕ್ಕೆ ಇಳಿಯುತ್ತೇವೆ ಎಂದು ಮುತಾಲಿಕ್ ತಿಳಿಸಿದರು.
ಹಿಂದುತ್ವಕ್ಕೆ ನ್ಯಾಯ ಕೊಡಿಸಲು ನಾನು ಸ್ವತಂತ್ರವಾಗಿ ನಿಲ್ಲುವುದು ಖಚಿತ. ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸಬೇಕು. 5 ಕ್ಷೇತ್ರದಲ್ಲಿ ಸರ್ವೆ ನಡೆಯುತ್ತಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಇದನ್ನ ಸ್ಪಷ್ಟಪಡಿಸುತ್ತೇನೆ ಎಂದರು.