Wednesday, November 29, 2023
spot_img
- Advertisement -spot_img

ಯಾವೊಬ್ಬ ಕಾರ್ಯಕರ್ತನೂ ತಲೆ ತಗ್ಗಿಸುವ ಕೆಲಸ ನನ್ನಿಂದ ಆಗಲ್ಲ: ಬಿವೈ ವಿಜಯೇಂದ್ರ

ಬೆಂಗಳೂರು : ನಮ್ಮ ಯಾವುದೇ ಒಬ್ಬ ಕಾರ್ಯಕರ್ತನೂ ತಲೆ ತಗ್ಗಿಸುವ ಕೆಲಸ ನನ್ನಿಂದ ಆಗಲ್ಲ ಎಂದು ಬಿಜೆಪಿಯ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ಭರವಸೆ ನೀಡಿದರು.

ಬಿಜೆಪಿ ರಾಜ್ಯ ಕಚೇರಿ ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಮಾತನಾಡಿದ ಅವರು, ದೀಪಾವಳಿಯ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷರು, ಮೋದಿಯವರು, ಅಮಿತ್ ಷಾರವರ ಆಶೀರ್ವಾದದಿಂದ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಈ ಸಂದರ್ಭದಲ್ಲಿ ನಾನು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗುತ್ತೇನೆ. ನನ್ನನ್ನು ಒಬ್ಬ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿರುವ ಶಿಕಾರಿಪುರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಆಯ್ಕೆಯಾದ ದಿನದಿಂದ ಎಲ್ಲಾ ಹಿರಿಯರೊಂದಿಗೆ ಮಾತನಾಡಿದ್ದೇನೆ. ವಿಜಯೇಂದ್ರ ನೀನು ಮುನ್ನುಗ್ಗು ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಒಂದು ದಿನವೂ ರಜೆ ತೆಗೆದುಕೊಳ್ಳದೆ ದೇಶ ಕಟ್ಟಲು ಮೋದಿಯವರು ಯಾವ ರೀತಿ ಮುಂದಾಗಿದ್ದಾರೋ, ಅದೇ ರೀತಿ ನಾವು ರಾಜ್ಯ ಕಟ್ಟಬೇಕು ಎಂದರು.

ನಮ್ಮ ಮುಂದಿನ ಗುರಿ ಮುಂದಿನ ಲೋಕಸಭೆ ಚುನಾವಣೆ. ನಾವು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ ನಿಜ. ಆದರೆ ಲೋಕಸಭೆಯಲ್ಲಿ ಒಗ್ಗಟ್ಟಿನಿಂದ ಗೆದ್ದು ತೋರಿಸೋಣ. ಇಷ್ಟೆಲ್ಲಾ ಹಿರಿಯರಿದ್ದರೂ ಕೂಡ ಹೈಕಮಾಂಡ್‌ನವರು ನನಗೆ ಅವಕಾಶ ಕೊಟ್ಟಿದ್ದಾರೆ. ಈ ಸ್ಥಾನದ ಮಹತ್ವ ನನಗೆ ಗೊತ್ತಿದೆ. ನಮ್ಮ ಯಾವೊಬ್ಬ ಕಾರ್ಯಕರ್ತನೂ ಕೂಡ ತಲೆತಗ್ಗಿಸುವಂತಹ ಕೆಲಸ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : ನಾನು ಸದಾ ವಿಜಯೇಂದ್ರ ಜೊತೆಗಿರುತ್ತೇನೆ: ನಳಿನ್ ಕುಮಾರ್ ಕಟೀಲ್

ಈ ಹಿಂದಿನ ನಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್‌ನವರು 40 % ಸರ್ಕಾರ ಎಂದು ಆರೋಪ ಮಾಡಿದ್ದರು. ಅದನ್ನು ರಾಜ್ಯದ ಜನರು ನಂಬಿದ್ರು. ಈಗಿನ ಸರ್ಕಾರ ಅದೇ ಸುಳ್ಳನ್ನು ನಿಜ ಮಾಡಲು ಹೊರಟಿದೆ. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ನಾವು ತಕ್ಕ ಉತ್ತರ ಕೊಡಬೇಕಾಗಿದೆ. ಮುಂದಿನ ಜಿಲ್ಲಾ ಮಟ್ಟದ ಚುನಾವಣೆಯಲ್ಲೂ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕಾಗಿದೆ ಎಂದರು.

ನಾವೇನು ಆಪರೇಷನ್ ಕಮಲ ಮಾಡಲ್ಲ. ಕಾಂಗ್ರೆಸ್‌ನವರು ಅದಕ್ಕೆ ಹೆದರಬೇಕಾಗಿಲ್ಲ. ಶಾಸಕರಿಗೆ ಅನುದಾನ ನೀಡದೇ ಜನರೇ ಕಾಂಗ್ರೆಸನ್ನು ದೂರ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರೇ ರಸ್ತೆಯಲ್ಲಿ ಓಡಾಡುತ್ತಿಲ್ಲ. ಕಾರಣ ಸರ್ಕಾರ ಅನುದಾನ ನೀಡುತ್ತಿಲ್ಲ. ರೈತರ ಪಾಡನ್ನು ಕೇಳೋರಿಲ್ಲ. ಕಾಂಗ್ರೆಸ್‌ ಪಕ್ಷದ ಶಾಸಕರೇ ಏನು ಪಾಠ ಕಲಿಸ್ತಾರೋ ನೋಡಬೇಕು. ಲೋಕಸಭೆ ಹಾಗೂ ಮುಂದೆ ವಿಧಾನಸಭೆ ಚುನಾವಣೆಗೆ ಹೋರಾಡಲು ನಾವು ಸಜ್ಜಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಅಧ್ಯಕ್ಷ ಸ್ಥಾ‌ನದ ನಿರೀಕ್ಷೆ ಮಾಡಿರಲಿಲ್ಲ. ಯಾರು ಕೂಡ ಹಿರಿಯರು ಬೇಸರದಲ್ಲಿ ಇಲ್ಲ. ಸಂಘಪರಿವಾರದ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ.
ಬಡವರ, ರೈತರ ಪರ ಧ್ವನಿ ಎತ್ತುತ್ತೇನೆ. ರಾಜ್ಯಾಧ್ಯಂತ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles