ರಾಮನಗರ: ರಾಜೀಗಾಂಧಿ ವಿವಿಗೆ ಸೇರಿದ ಮೆಡಿಕಲ್ ಕಾಲೇಜು ಕನಕಪುರಕ್ಕೆ ಶಿಫ್ಟ್ ಆಗಿದೆ ಅನ್ನೋ ವಿಚಾರ ಕೇವಲ ಊಹಾಪೋಹ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಆದಷ್ಟು ಬೇಗ ಯಥಾಸ್ಥಿತಿ ಏನಿದೆ ಅದನ್ನು ಕಾಪಾಡಬೇಕು ಅನ್ನೋದೇ ನನ್ನ ಅಭಿಪ್ರಾಯವಾಗಿದೆ. ಈ ವಿಚಾರದಲ್ಲಿ ನಾನು ನಮ್ಮ ಕ್ಷೇತ್ರದ ಜನರ ಪರವಾಗಿ ನಿಲ್ಲುತ್ತೇನೆ. ನನ್ನ ನಿಲುವನ್ನ ಯಾವುದೇ ಕಾರಣಕ್ಕೂ ಬದಲಾಯಿ ಸುವುದಿಲ್ಲ ಎಂದು ತಿಳಿಸಿದರು.
ಕನಕಪುರಕ್ಕೆ ಒಂದು ಹೊಸ ಪ್ರತ್ಯೇಕ ಕಾಲೇಜು ತರಬೇಕು ಎಂದು ಈಗಾಗಲೇ ನಮ್ಮ ನಾಯಕರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದೇನೆ, ರಾಮನಗರಕ್ಕೆ ಮಂಜೂರು ಆಗಿರುವ ಮೆಡಿಕಲ್ ಕಾಲೇಜನ್ನು ತಪ್ಪಿಸುವುದು ಬೇಡ ಯಥಾಸ್ಥಿತಿಯಲ್ಲೇ ಇದನ್ನು ಇಲ್ಲೇ ಮುಂದುವರಿಸಬೇಕೆಂದು ನಾನು ಅಂದುಕೊಂಡಿದ್ದೇನೆ. ರಾಮನಗರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜು ಕನಕಪುರಕ್ಕೆ ಹೋಗೊಲ್ಲ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ : ‘INDIA ಮೈತ್ರಿಗಾಗಿ ಸ್ಟಾಲಿನ್ ಜೊತೆ ಡಿ.ಕೆ ಶಿವಕುಮಾರ್ ಒಳ ಒಪ್ಪಂದ’
ನಮ್ಮದೇ ಸರ್ಕಾರವಿದೆ ಹಾಗಾಗಿ ಉಪ ಮುಖ್ಕಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನಕಪುರಕ್ಕೆ ಪ್ರತ್ಯೇಕ ಮೆಡಿಕಲ್ ಕಾಲೇಜು ಸ್ಥಾಪನೆಗೆ ಮಂಜೂರು ಮಾಡಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ಈಗಾಗಲೇ ಈ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿ ಚರ್ಚೆ ಮಾಡಿದ್ದೇನೆ. ಡಿಸಿಎಂ ಮೇಲೆ ನಮ್ಮ ಜನರು ನಂಬಿಕೆ ಇಟ್ಟಿದ್ದಾರೆ. ರಾಜೀವ್ ಗಾಂಧಿ ವಿವಿಯ ಮೆಡಿಕಲ್ ಕಾಲೇಜು ರಾಮನಗರದಲ್ಲೇ ಇರುತ್ತದೆ ಎಂದರು.
ನಮ್ಮದೇ ಸರ್ಕಾರ ಇರುವ ಹಿನ್ನಲೆಯಲ್ಲಿ ಕನಕಪುರ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ವಿರೋದಿಸಿ ಹೋರಾಟ ಮಾಡುವ ಅಗತ್ಯ ಇಲ್ಲ ರಾಮನಗರ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುವ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಲ್ಲಿ ಮೆಡಿಕಲ್ ಸ್ಥಾಪನೆ ಮಾಡುತ್ತೇವೆ. ಈ ವರ್ಷ ಆಗದಿದ್ದರೆ ಮುಂದಿನ ವರ್ಷವಾದರೂ ಜಿಲ್ಲೆಗೆ ಮೆಡಿಕಲ್ ಕಾಲೇಜು ತರುತ್ತೇವೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.