ಕೋಲಾರ: ಕಾಂಗ್ರೆಸ್‌ಗೆ ನನ್ನನ್ನು ಸೇರಿಸಿಕೊಳ್ಳಲು ತೀವ್ರ ಕಸರತ್ತು ಒಳಗೊಳಗೆ ನಡೆಯುತ್ತಿದ್ದು, ಆದ್ರೆ ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಎಐಸಿಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ನನಗೆ ಕರೆ ಮಾಡಿ ಪಕ್ಷಕ್ಕೆ ಆಹ್ವಾನಿಸಿರುವುದು ಸತ್ಯ, ಆದರೆ ನಾನು ನಿರಾಕರಿಸಿದೆ , ನಾನು ಜೆಡಿಎಸ್ ಬಿಡುವ ಯಾವುದೇ ಯೋಚನೆ ಇಲ್ಲ ಅಂತಾ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ಸರ್ಕಾರದಲ್ಲಿ ಅಭಿವೃದ್ದಿಗೆ ಯಾವುದೇ ಸಚಿವರು ಸಹಕರಿಸುತ್ತಿಲ್ಲ, ಮುಂದಿನ ಲೋಕಸಭಾ ಚುನಾವಣೆವರೆಗೂ ಕಾದು ನೋಡಿ ರಾಜ್ಯದಲ್ಲಿ ಯಾರು ಎಲ್ಲಿರುತ್ತಾರೆ ಅನ್ನೋದು ಗೊತ್ತಾಗುತ್ತೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಭಾರತದಲ್ಲಿ ತಯಾರಿಕಾ ಘಟಕ ಹೆಚ್ಚಿಸಲು ಆಪಲ್ ಸಜ್ಜು; ಅಧಿಕಾರಿಗಳೊಂದಿಗೆ ಸಭೆ!
ಕಾಂಗ್ರೆಸ್ ನಲ್ಲಿ ಈಗಲೇ ಭಿನ್ನಮತ ಕುದಿಯುತ್ತಿದೆ, ಮೊದಲು ಕಾಂಗ್ರೆಸ್ ಅದನ್ನು ಸರಿಪಡಿಸಿಕೊಳ್ಳಲಿ.. ರಾಜ್ಯದಲ್ಲಿ ವರ್ಗಾವಣೆ ದಂಧೆ ಮುಗಿದಿದೆ ಇನ್ನು ಒಂದು ವರ್ಷದ ಕಾಲ ಯಾವುದೇ ವರ್ಗಾವಣೆಗಳು ನಡೆಯುವುದಿಲ್ಲ, ಎಲ್ಲರನ್ನೂ ವರ್ಗಾವಣೆ ಮಾಡಿದ್ದಾಗಿದೆ ಎಂದು ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.