ಕಲಬುರಗಿ: ಸಿದ್ದರಾಮಯ್ಯ ಆಳಂದದಿಂದ ಸ್ಪರ್ಧಿಸಿದರೆ, ನನಗೆ ಹಾಲು ಕುಡಿದಷ್ಟೇ ಸಂತೋಷವಾಗುತ್ತದೆ. ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತೇನೆ ಎಂದು ಮಾಜಿ ಉಪ ಸಭಾಪತಿ ಬಿಆರ್ ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಳಂದ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಅವರನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ಬರಿ ನಾಮೀನೇಷನ್ ಫೈಲ್ ಮಾಡಿ ಹೋದರೆ ಸಾಕು. ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದಾರೆ.
ಸಿದ್ದರಾಮಯ್ಯ ಈಗಾಗಲೇ ಒಮ್ಮೆ ಮುಖ್ಯಮಂತ್ರಿಯಾದವರು. ಮತ್ತೊಮ್ಮೆ ಅವಕಾಶ ಸಿಕ್ಕರೆ ಅವರೇ ಸಿಎಂ ಆಗಲಿ ಎಂದು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಜನಪರ ನಾಯಕ, ಅವರ ಜನಪರ ಕೆಲಸಗಳೇ ಮುಂದಿನ ಸಿಎಂ ನ್ನಾಗಿ ಮಾಡುತ್ತದೆ ಎಂದರು.
ಮಾಜಿ ಸಚಿವ ಬಾಬೂ ರಾವ್ ಚಿಂಚನಸೂರು ಅವರಂತೆ ಇನ್ನಷ್ಟು ವಿಕೆಟ್ ಗಳು ಬಿಜೆಪಿಯಿಂದ ಪತನವಾಗಲಿದೆ, ಇನ್ನೂ ಅನೇಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಬರಲಿದ್ದಾರೆ ಎಂದರು.