ಚಿತ್ರದುರ್ಗ: ಚಿತ್ರದುರ್ಗದ ನೂತನ ಮೆಡಿಕಲ್ ಕಾಲೇಜ್ ತರಗತಿ ಆರಂಭವಾಗುತ್ತಿದೆ 26 ಮಂದಿ ಪ್ರವೇಶ ಪಡೆದಿದ್ದಾರೆ, 150 ಸೀಟು ಪ್ರವೇಶಕ್ಕೆ ಅನುಮತಿ ಸಿಕ್ಕಿದೆ ಎಂದು ವೈದ್ಯ ಸಚಿವ ಡಾ. ಎಸ್ ಆರ್ ಶರಣ ಪಾಟೀಲ್ ಹೇಳಿದರು.
ಚಿತ್ರದುರ್ಗದ ಜಿ ಪಂ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ನೂತನ ಕಟ್ಟಡಕ್ಕೆ ಹಿಂದಿನ ಸರ್ಕಾರದಲ್ಲಿ ಟೆಂಡರ್ ಆಗಿದೆ, ಕೆಲಸ ಶುರು ಆಗಿ ಪೂರ್ಣ ಗೊಳ್ಳಲು ಎರಡು ವರ್ಷಗಳು ತೆಗೆದುಕೊಳ್ಳುತ್ತದೆ. ಜ್ಞಾನ ಗಂಗೋತ್ರಿಯಲ್ಲಿ ತರಗತಿ ಆರಂಭಿಸುತ್ತಿದ್ದೇವೆ, ವಿದ್ಯಾರ್ಥಿಗಳಿಗೆ ವಸತಿ ನಿಲಯವನ್ನು ಆಸ್ಪತ್ರೆ ಆವರಣದಲ್ಲಿ ಮಾಡುತ್ತಿದ್ದೇವೆ, ಮೆಡಿಕಲ್ ಕಾಲೇಜ್ ನ್ನು ಈಗಿರುವ ಆಸ್ಪತ್ರೆ ಆವರಣದಲ್ಲಿರುವ ಜಾಗದಲ್ಲಿಯೇ ಮಾಡಲಾಗುತ್ತದೆ, ಇನ್ನು ನರ್ಸಿಂಗ್ ಬಿಎಸ್ಸಿ ನರ್ಸಿಂಗ್ ಮತ್ತು ಜಿಎನ್ ಎಂ ನವರಿಗೆ ಹೊಸ ವಸತಿ ನಿಲಯ ಮಾಡಿಕೊಡುತ್ತೇವೆ ಎಂದರು.
ಆಸ್ಪತ್ರೆ ಕಟ್ಟಡ ಸರ್ಕಾರದ ಮಟ್ಟದಲ್ಲಿದೆ ಅದನ್ನು ಶೀಘ್ರವಾಗಿ ಮಾಡುತ್ತೇವೆ, ಯಾರು ಯಾರನ್ನಾದರೂ ಭೇಟಿ ಮಾಡಲಿ ನಾವು ಅಭಿವೃದ್ದಿ ವಿಚಾರಕ್ಕೆ ಬಂದಿದ್ದೇವೆ , ಅಭಿವೃದ್ದಿ ವಿಚಾರವಿದ್ದರೆ ಹೇಳಿ ಮಾತನಾಡುತ್ತೇನೆ ರಾಜಕೀಯ ಮಾತನಾಡೋಲ್ಲ , ಸರ್ಕಾರಿ ಆಸ್ಪತ್ರೆ ಇರುವ ಜಾಗದಲ್ಲಿಯೇ ನೂತನ ಆಸ್ಪತ್ರೆ ಮತ್ತು ಕಾಲೇಜ್ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ರಾಜ್ಯ ಬಿಜೆಪಿ ನಾಯಕರ ಮೇಲೆ ಮುಂದುವರಿದ ಮೋದಿ ಮುನಿಸು!
ಸಚಿವ ಸುಧಾಕರ್ ಮಾತನಾಡಿ, ಕಾಲೇಜ್ ನಿರ್ಮಾಣದ ಸ್ಥಳದಲ್ಲಿ ಯಾವುದೇ ಗೊಂದಲವಿಲ್ಲ, ಹೊಸ ಕಟ್ಟಡದಲ್ಲಿ ಏನೇನು ನ್ಯೂನ್ಯತೆ ಇದೆ, 400 ಕೋಟಿ ರೂಪಾಯಿಯಲ್ಲಿ ನ್ಯೂನ್ಯತೆಯನ್ನು ಸರಿಪಡಿಸಲಾಗುತ್ತದೆ, ಕಾಲೇಜಿನ ಉದ್ಘಾಟನೆಯನ್ನು ಸೆಪ್ಟಂಬರ್ 15 ರಂದು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸ್ಪೆಷಲ್ ಆಫೀಸರ್ ಗೆ ತರಾಟೆ ತೆಗೆದುಕೊಂಡ ಶಾಸಕ ವೀರೇಂದ್ರ ಪಪ್ಪಿ
ಇನ್ನೂ ಮೆಡಿಕಲ್ ಕಾಲೇಜ್ ಬೇರೆಡೆಗೆ ಶಿಫ್ಟ್ ಮಾಡುವ ವಿಚಾರಕ್ಕೆ ಮೆಡಿಕಲ್ ಕಾಲೇಜ್ ಸ್ಪೆಷಲ್ ಆಫೀಸರ್ ಗೆ ಶಾಸಕ ವೀರೇಂದ್ರ ಪಪ್ಪಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಶೇಷ ಕಾಳಜಿ ಯಾಕೆ ನಿಮಗೆ ನಿಮ್ಮ ಕೆಲಸ ನೀವು ಮಾಡಿ, ಬಸ್ ನಿಲ್ದಾಣಕ್ಕೆ ಮೂರು ಸಾವಿರ ಬಸ್ ಬರುವಂತೆ ಸಚಿವ ರಾಮಲಿಂಗಾ ರೆಡ್ಡಿ ಮಾಡಿದ್ದಾರೆ ಎಂದು ಶಾಸಕ ವೀರೇಂದ್ರ ಪಪ್ಪಿ ಗದರಿಸಿದರು. ಇದರ ಮಧ್ಯೆ ಮಾತನಾಡಿ ನಾನು ಸಾರಿಗೆ ನಿಗಮದ ಅಧ್ಯಕ್ಷನಾದಾಗ 80 ಕೋಟಿ ತಂದಿದ್ದೇನೆ ರಾಮಲಿಂಗಾ ರೆಡ್ಡಿ ತಂದಿದ್ದಾರೆ ಅಂದರೆ ಹೇಗೆ ? ಎಂದು ಡಾ. ಎಂ. ಚಂದ್ರಪ್ಪ ರೇಗಿದ್ದಾರೆ, ಶಾಸಕ ವೀರೇಂದ್ರ ನೀವೇ ತಂದಿರಬಹುದು,ಆಯಿತು ಎಂದು ಮಾತು ಬೆಳೆಸದೆ ಸುಮ್ಮನಾದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.