ರಾಯಚೂರು: ಗಂಗಾವತಿಯಲ್ಲಿ ಮನೆ ಮಾಡಿ ಉತ್ತರ ಕರ್ನಾಟಕದೊಂದಿಗೆ ಓಡಾಟ ಹೆಚ್ಚಿಸಲು ಪ್ಲಾನ್ ಇದೆ. ಡಿಸೆಂಬರ್ 25ರಂದು ಮಹನೀಯರು ಜನಿಸಿದ ದಿನವಾಗಿದೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಡಿ.25 ರಂದು ಎಲ್ಲಾ ಮಾಹಿತಿ ನೀಡುತ್ತೇನೆ. ನನ್ನ ಜೊತೆ ಯಾರು ಇರ್ತಾರೆ ಯಾರು ಬರ್ತಾರೆ ಅನ್ನೋದನ್ನು ಹೇಳುತ್ತೇನೆ ಎಂದು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕೀಯ ಜೀವನ ಪುನಃ ಪ್ರಾರಂಭ ಮಾಡುತ್ತಿದ್ದೇನೆ. ಸಾರ್ವಜನಿಕ ಬದುಕಿಗೆ ಬರುತ್ತಿದ್ದೇನೆ. ಹೀಗಾಗಿ ನಮ್ಮ ಆಪ್ತರೆಲ್ಲರನ್ನೂ ಮಾತನಾಡಿಸಿಕೊಂಡು ಹೋಗಲು ಮಸ್ಕಿಗೆ ಬಂದಿದ್ದೇನೆ. ರಾಜಕೀಯ ಪ್ರವೇಶ ಕುರಿತ ಎಲ್ಲಾ ಪ್ರಶ್ನೆಗಳಿಗೆ ಡಿಸೆಂಬರ್ 25ಕ್ಕೆ ಉತ್ತರ ನೀಡುತ್ತೇನೆ.
ಸ್ಥಳೀಯ ಮುಖಂಡರು, ಮಾನ್ವಿ ಕ್ಷೇತ್ರದ ಕಾಂಗ್ರೆಸ್ , ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸೇರಿ ಹಲವರು ಜನಾರ್ದನ ರೆಡ್ಡಿ ಜೊತೆ ಸಭೆ ನಡೆಸಿರುವ ರೆಡ್ಡಿ ಎಲ್ಲಾ ಪ್ರಶ್ನೆಗಳಿಗೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್‍ನಲ್ಲಿ ಉತ್ತರ ಸಿಗುತ್ತೆ ಎಂದು ಹೇಳಿದ್ದಾರೆ. ಕಳೆದ 18 ವರ್ಷದಿಂದ ಮಸ್ಕಿಗೆ ನಾನು ಬರುತ್ತಿದ್ದೇನೆ.
ಮಸ್ಕಿಯಲ್ಲಿ ನೂರಾರು ಜನರ ಜೊತೆಗೆ ನನ್ನ ಒಡನಾಟವಿದೆ. ರಾಜಕೀಯ ಜೀವನ ಆರಂಭಿಸಲು ಆಪ್ತರ ಭೇಟಿಗೆ ಮಸ್ಕಿಗೆ ಬಂದಿದ್ದೇನೆ. ನಾಳೆ ಗಂಗಾವತಿಯಲ್ಲಿ ದುರ್ಗಾದೇವಿ ಜಾತ್ರೆ ಇದೆ. ಆ ಜಾತ್ರೆಯಲ್ಲಿ ಭಾಗವಹಿಸುತ್ತೇನೆ ಅಂತ ತಿಳಿಸಿದ್ದಾರೆ .