Sunday, October 1, 2023
spot_img
- Advertisement -spot_img

́ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ಶ್ರಮಿಸುತ್ತೇನೆʼ

ಧಾರವಾಡ: ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಈಗಾಗಲೇ ಸರಕಾರಕ್ಕೆ ಒತ್ತಾಯ ಮಾಡಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಎನ್ ಹೆಚ್ ಕೋನರಡ್ಡಿ ಹೇಳಿದರು.

ರಾಜ್ಯದ ಎಲ್ಲೆಡೆ ಬರಗಾಲ ಆವರಿಸಿದೆ, ಮುಂಗಾರು ಆರಂಭದಲ್ಲಿ ಮಳೆ ಆಗಲಿಲ್ಲ, ಮೊದಲು ಸ್ಯಾಟಲೈಟ್‌ ನಲ್ಲಿ ಮಳೆ ಅಭಾವ ಕುರಿತು ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ತಾಲೂಕುಗಳನ್ನ ಸರಿಯಾಗಿ ಗುರುತು ಮಾಡಲಿಲ್ಲ, ರೇನ್ ಫಾಲ್ ನಲ್ಲಿ ಸರಿಯಾಗಿ ಕ್ಷೇತ್ರ ಗುರುತು ಆಗದ ಕಾರಣ ಸಮಸ್ಯೆ ಆಯಿತು, ಇದರಿಂದಾಗಿ ಘೋಷಣೆಗೆ ಅಡ್ಡಿ ಆಯಿತು, ಈಗ‌ ಮತ್ತೇ ಸಿಎಂ ಸಿದ್ದರಾಮಯ್ಯನವರೆಗೆ ಮನವಿ ಮಾಡಲಾಗಿದೆ ಎಂದರು.

ಇದನ್ನೂ ಓದಿ : ಪಕ್ಷಾಂತರಿಗಳ ವಿರುದ್ಧ ಪವಾರ್ ‘ಗೆರಿಲ್ಲಾ ಯುದ್ಧ ತಂತ್ರ’ ಅನುಸರಿಸುತ್ತಿದ್ದಾರೆ: ಸಂಜಯ್ ರಾವುತ್

ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಸ್ಪಷ್ಟವಾದ ಮಾಹಿತಿ ನನಗೆ ಇಲ್ಲ, ನಮ್ಮ ಪಕ್ಷದ ಹಿರಿಯ ನಾಯಕರು ನೋಡಿಕೊಳ್ತಾರೆ, ನಾನು ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನ ತರಲು ಮಾತ್ರ ಗಮನ ಹರಿಸುವೆ, ಕ್ಷೇತ್ರವನ್ನು ಅಭಿವೃದ್ಧಿ ಮಾಡುವಲ್ಲಿ ಶ್ರಮಿಸುತ್ತೇನೆ, ಕಾಂಗ್ರೆಸ್ ಬಂದರೆ ಬರಲಿ ನಾನು ಏನು ಮಾಡಲಿ ಎಂದು ಪ್ರಶ್ನಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles