ಬೆಂಗಳೂರು: ರಾಮನಗರ ಸೋಲಿನಿಂದ ನಾನು ಕಂಗೆಟ್ಟಿಲ್ಲ, ಸೋತ ಜಾಗದಲ್ಲೇ ನಮ್ಮ ಪಕ್ಷದ ಬಾವುಟ ಹಾರಿಸುವ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದ ಬಳಿಕ ಮಾತನಾಡಿದ ಅವರು, ಬಿಜೆಪಿ ಜೊತೆ ಮೈತ್ರಿ ವಿಚಾರವನ್ನು ದೇವೇಗೌಡರು ಈಗಾಗಲೇ ನಮ್ಮ ಪಕ್ಷದ ಶಾಸಕರ ಜೊತೆ ಚರ್ಚೆ ಮಾಡಿದ್ದಾರೆ ಎಂದಿದ್ದಾರೆ.
ಮೈತ್ರಿ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಲಿದೆ. ನಾನು ಚುನಾವಣಾ ರಾಜಕಾರಣದಿಂದ ಬಹಳ ದೂರ ಉಳಿದಿದ್ದೇನೆ. ಇಂದಿನ ಚುನಾವಣಾ ವ್ಯವಸ್ಥೆ ಬಗ್ಗೆ ನನಗೆ ಬಹಳ ಬೇಸರವಿದೆ. ರಾಮನಗರ ಕ್ಷೇತ್ರದಿಂದ 94ರಲ್ಲಿ ದೇವೇಗೌಡರು ಆಯ್ಕೆಯಾಗಿದ್ದರು. ನಂತರ ಕುಮಾರಸ್ವಾಮಿ ಇದೇ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದಾರೆ. ರಾಮನಗರ ಅವತ್ತಿಗೂ ಇವತ್ತಿಗೂ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಮುಂದುವರೆದಿದೆ ಎಂದರು.
ಇದನ್ನೂ ಓದಿ: ಬೆಂಗಳೂರಿನ ಬೀಗರ ಮನೆಗೆ ಭೇಟಿ ನೀಡಿದ ರಿಷಿ ಸುನಕ್ ತಾಯಿ
ಲೋಕಸಭಾ ಚುನಾವಣೆಗೆ ನಾನು ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ. ರಾಮನಗರ ಸೋಲಿನಿಂದ ನಾನು ಕಂಗೆಟ್ಟಿಲ್ಲ. ಸೋತ ಜಾಗದಲ್ಲೇ ನಮ್ಮ ಪಕ್ಷದ ಬಾವುಟ ಹಾರಿಸುವ ಕೆಲಸ ಮಾಡುತ್ತೇನೆ. ಯುವಕರ ಜೊತೆ ನಿಂತು ಪಕ್ಷ ಕಟ್ಟುವ ಕೆಲಸ ಮಾಡಿಲಿದ್ದೇನೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.