ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ ಇದ್ದ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಯಾಕೆ ಹೋಗ್ತಿದ್ದಾರೆ ಅಂತಾ ನಮಗೆ ಅರ್ಥವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಅಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ ಅಂತಾರೆ, ನಾನು ಅದಕ್ಕೆ ಟೀಕೆ ಟಿಪ್ಪಣಿ ಮಾಡಲು ಇಷ್ಟ ಪಡಲ್ಲ. ಜನ ಅದನ್ನ ನಿರ್ಧರಿಸುತ್ತಾರೆ ಎಂದರು.
ಟಿಪ್ಪು ಪ್ರತಿಮೆ, ಬಸವಣ್ಣ ಪ್ರತಿಮೆ ನಿರ್ಮಾಣ ವಿಚಾರದ ಕುರಿತು ಮಾತನಾಡಿ, ಟಿಪ್ಪು ಪ್ರತಿಮೆ ನಿರ್ಮಿಸುವುದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಏನು ತೀರ್ಮಾನ ಮಾಡುತ್ತೆ ನೋಡೋಣ. ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ ದೊರೆತಿದೆ. ಮುಂದೆ ಮುಖ್ಯಮಂತ್ರಿಗಳು ಅದನ್ನ ಮಾಡ್ತಾರೆ ಎಂದು ತಿಳಿಸಿದರು.
ಮೈತ್ರಾದೇವಿಯವರ ಹೆಸರಿನಲ್ಲಿ ಎಡೆಯೂರಿನಲ್ಲಿ ಬಡವರಿಗೆ, ಕಲ್ಯಾಣ ಮಂಟಪ ಕಟ್ಟಿಸಿಕೊಡಬೇಕು ಅನ್ನೋದು ಬಹಳ ದಿನದ ಕನಸಾಗಿತ್ತು. ಸಾಂಕೇತಿಕವಾಗಿ ಹಣಕೊಟ್ಟು ಬಡವರು ಮದುವೆ (Marriage Hall) ಮಾಡಿಕೊಳ್ಳಲು, ಸಾಮೂಹಿಕ ಕಲ್ಯಾಣವಾಗಲು ಈ ಕಲ್ಯಾಣ ಮಂಟಪ ಕಟ್ಟಿಸಲಾಗಿದೆ ಎಂದರು.