ಹುಬ್ಬಳ್ಳಿ: ಈದ್ಗಾ ಮೈದಾನ ಯಾವುದೇ ಒಂದು ಸಮುದಾಯಕ್ಕೆ ಸೇರಿದ್ದಲ್ಲ ಎಂದು ಕೇಂದ್ರ ಸಚಿವ ಪ್ರಲ್ದಾದ್ ಜೋಷಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈದಾನ ಪಾಲಿಕೆಯ ಆಸ್ತಿ, ಗಣೇಶ ಮೂರ್ತಿ ಇಡಲು ಪಾಲಿಕೆ ಅನುಮತಿ ಬೇಕು, ಕಳೆದ ವರ್ಷ ಕೋರ್ಟ್ ಆದೇಶದಂತೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಪರಮೇಶ್ವರ್ ಜಂಟಲ್‌ಮೆನ್ ಅಂದುಕೊಂಡಿದ್ದೆವು, ಆದರೆ ವೋಟ್‌ಬ್ಯಾಂಕ್ ಪಾಲಿಟಿಕ್ಸ್‌ಗಾಗಿ ಏನೇನೋ ಮಾತಾಡ್ತಿದ್ದಾರೆ. ಪ್ರಕಾಶ್ ರಾಜ್ ಅತೃಪ್ತ ಆತ್ಮಗಳು, ಸುದ್ದಿಯಲ್ಲಿರಲು ಬಾಯಿಗೆ ಬಂದಂತೆ ಮಾತಾಡ್ತಾರೆ, ಹಿಂದೂ, ಸನಾತನ ಧರ್ಮ ಅನ್ನೋದು ನಿತ್ಯನೂತನ, ಚಿರಪುರಾತನ.
ಸನಾತನ ಸಂಸ್ಕೃತಿ ಬಹಳ ಪುರಾತನವಾಗಿದೆ ಅನ್ನೋದು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ : ‘ಹೆಸರಲ್ಲ ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ’
ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿರುವ ವಿಚಾರವಾಗಿ ಮಾತನಾಡಿ, ಸರ್ಕಾರ ಯಾವುದೂ ಪರ್ಮನೆಂಟ್ ಅಲ್ಲ, ಪೊಲೀಸರು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಿಲ್ಲಿಸಬೇಕು, ರಾಜಕಾರಣಿಗಳ ಮಾತು ಕೇಳಿ ಕೇಸ್ ಹಾಕಬಾರದು, ಬಿಜೆಪಿ ಹೋರಾಟದಿಂದಲೇ ಮೇಲೆ ಬಂದ ಪಕ್ಷ.
ಪೊಲೀಸರ ವಿರುದ್ಧ ಹೋರಾಟ ಮಾಡಲೇಬೇಕಾಗುತ್ತದೆ ಎಂದು ಎಚ್ಚರಿಸಿದರು.
NDRF ಮಾನದಂಡ ಕಾಲ ಕಾಲಕ್ಕೆ ಬದಲಾಗಿದೆ, ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸೋ ಕೆಲಸ ಆಗ್ತಿದೆ, NDRF ಮಾನದಂಡ ಪ್ರಕಾರ ಮೊದಲು ಬಹಳ ಕಡಿಮೆ ಹಣ ಬರ್ತಿತ್ತು , ಯಡಿಯೂರಪ್ಪ 5 ಲಕ್ಷ ಕೊಟ್ರು, ನೀವ್ಯಾಕೆ ಕೊಟ್ಟಿಲ್ಲ? ಎಂದು ಪ್ರಶ್ನಿಸಿದರು.
234 ಬಿಲಿಯನ್ ಯುನಿಟ್ ವಿದ್ಯುತ್ ಬೇಡಿಕೆ ಇದ್ದು, ಇಷ್ಟು ಯಾವತ್ತೂ ಬೇಡಿಕೆ ಇರಲಿಲ್ಲ, ಇದಕ್ಕೆಲ್ಲ ಕಾರಣ ಬರ, ಜನರಿಗೆ ತೊಂದರೆ ಆಗದಂತೆ ನಾವು ಸಹಕಾರ ಕೊಟ್ಟಿದ್ದೇವೆ ಎಂದರು.
ಮೋದಿ ಕೂಡಾ ಚಹಾ ಮಾರಿ ಪ್ರಧಾನಿ ಆದವರು, ಯಾರೇ ಆದರೂ ಪಕ್ಷದ ಫೋರಂನಲ್ಲಿ ಮಾತಾಡಬೇಕು. ಪ್ರದೀಪ ಶೆಟ್ಟರ್ ಆಗಿರಲಿ ಯಾರೇ ಆಗಿರಲಿ ಸಾರ್ವಜನಿಕವಾಗಿ ಮಾತಾಡಬಾರದು, ಮುನೇನಕೊಪ್ಪ ಹೇಳಿಕೆಗೆ ನಾನು ಆವತ್ತೇ ಹೇಳಿದ್ದೀನಿ, ಅವರ ಹೇಳಿಕೆ ಪರಿಗಣನೆ ಮಾಡ್ತೀವಿ ಎಂದು ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.