Thursday, September 28, 2023
spot_img
- Advertisement -spot_img

‘ಭಾರತದೊಂದಿಗೆ ಯುದ್ಧಕ್ಕೆ ಬಂದ್ರೆ ನಿಮ್ಮ ಮಕ್ಕಳನ್ನು ಬೇರೆಯವರು ಸಾಕಬೇಕಾಗುತ್ತೆ’

ನವದೆಹಲಿ: ನೀವು ಭಾರತದೊಂದಿಗೆ ಯುದ್ಧಕ್ಕೆ ಬಂದರೆ ನಿಮ್ಮ ಮಕ್ಕಳನ್ನು ಬೇರೆಯವರು ಸಾಕಬೇಕಾಗುತ್ತದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ ಸಂಬಂಧ ಟ್ವೀಟ್ (ಎಕ್ಸ್) ಮಾಡಿರುವ ಅವರು ಈ ರೀತಿ ಬರೆದುಕೊಂಡಿದ್ದಾರೆ.

ಭಾರತವು ಯುದ್ಧವನ್ನು ಕಂಡಿದೆ ಮತ್ತು ಯುದ್ಧವನ್ನು ಎಂದಿಗೂ ಬಯಸುವುದಿಲ್ಲ ಆದರೆ ನೀವು ಭಾರತದೊಂದಿಗೆ ಯುದ್ಧಕ್ಕೆ ಹೋದರೆ, ಬೇರೆಯವರು ನಿಮ್ಮ ಮಕ್ಕಳನ್ನು ಸಾಕಬೇಕಾಗುತ್ತದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ನ್ಯೂ ಇಂಡಿಯಾ ಹಿಂದೆ ಸರಿಯುವುದಿಲ್ಲ ಮತ್ತು ಹೆದರುವುದಿಲ್ಲ. ಭಾರತಕ್ಕೆ ಶತ್ರುಗಳಿದ್ದಾರೆ – ಈ ಶತ್ರುಗಳು ಭಾರತದ ಬೆಳವಣಿಗೆಯನ್ನು ತಡೆಯಲು ಬಯಸುತ್ತಾರೆ. ಆದರೆ ಅವರು ಇದನ್ನು ತಿಳಿದಿರಬೇಕು. ಭಾರತೀಯ ಮಿಲಿಟರಿ ಈಗ ಹೈಟೆಕ್ ಮತ್ತು ಬಲಶಾಲಿಯಾಗಿದೆ. ಹೀಗಾಗಿ ಯಾವುದೇ ತಪ್ಪು ಮಾಡಬೇಡಿ ಎಂದಿದ್ದಾರೆ.

ಇದನ್ನೂ ಓದಿ: ʼಲೋಕʼ ಯುದ್ಧಕ್ಕೆ‌ ನಾವು ಸನ್ನದ್ಧ: ಕಾಂಗ್ರೆಸ್‌

ಮಂಗಳವಾರ ಅನಂತನಾಗ್ ಜಿಲ್ಲೆಯಲ್ಲಿ ಆರಂಭವಾದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಉಪ ಅಧೀಕ್ಷಕ ಹುಮಾಯೂನ್ ಭಟ್ ಮತ್ತು ರೈಫಲ್‌ಮ್ಯಾನ್ ರವಿಕುಮಾರ್ ರಾಣಾ ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಆದರೆ ಇಂದು ಮೂವರು ಉಗ್ರರನ್ನು ಸೇನೆ ಸೆದೆಬಡಿದಿದೆ.

ಇದನ್ನೂ ಓದಿ: ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ಕಾಂಗ್ರೆಸ್ ಆಗ್ರಹ

ಉಗ್ರರ ಬಂಧನಕ್ಕೆ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರದಿಂದ ಮಳೆಯ ನಡುವೆಯೂ ಕಾರ್ಯಾಚರಣೆ ಎಡೆಬಿಡದೆ ಮುಂದುವರಿದಿತ್ತು. ಉಗ್ರರು ಬೆಟ್ಟದ ಗುಹೆಯೊಂದರಲ್ಲಿ ಅಡಗಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು. ಹೀಗಾಗಿ ಅತ್ಯಾಧುನಿಕ ಡ್ರೋನ್ ಕ್ಯಾಮರಾ ಬಳಸಿ ಕಾರ್ಯಾಚರಣೆಗಿಳಿಯಲಾಗಿತ್ತು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles