ನವದೆಹಲಿ: ಸಾರ್ವಜನಿಕರು ಬಯಸಿದರೆ ಮತ್ತು ಬಿಜೆಪಿ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಸಿದ್ಧಳಿದ್ದೇನೆ ಎಂದು ನಟಿ ಕಂಗನಾ ರಾಣಾವತ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, 2024 ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸಲು ಸಿದ್ಧ ಎಂದು ರಾಜಕೀಯ ಪ್ರವೇಶಿಸುವ ಮೂಲಕ ಸಾರ್ವಜನಿಕ ಸೇವೆ ಮಾಡಲು ನೀವು ಮುಕ್ತರಾಗಿದ್ದೀರಾ ಎಂದು ಕೇಳಿದಾಗ ಈ ರೀತಿ ಹೇಳಿದ್ದಾರೆ. ಕಂಗನಾ ರಣಾವತ್ ಎಲ್ಲಾ ರೀತಿಯ ಭಾಗವಹಿಸುವಿಕೆಗೆ ತುಂಬಾ ಮುಕ್ತವಾಗಿದ್ದೇನೆ ಎಂದು ಹೇಳಿದರು.
‘ನಾನು ಹೇಳಿದಂತೆ, ಹಿಮಾಚಲ ಪ್ರದೇಶದ ಜನರು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದರೆ ಅದು ಉತ್ತಮವಾಗಿರುತ್ತದೆ. ಆದ್ದರಿಂದ, ಖಂಡಿತವಾಗಿಯೂ, ಇದು ಶೋಭಾಗ್ಯ ಕಿ ಬಾತ್ ಆಗಿರುತ್ತದೆ ಅಂತ ಹೇಳಿದ್ದಾರೆ.ನನಗೆ ರಾಜಕೀಯ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಇರುವುದು ನಿಜ. ಆದರೆ, ಯಾವುದೇ ಪಕ್ಷವನ್ನು ಸೇರಲಾರೆ. ನನ್ನ ಆದ್ಯತೆ ಸಿನಿಮಾ. ಸಿನಿಮಾದಲ್ಲೇ ರಾಜಕೀಯ ಕುರಿತಾದ ವಿಷಯಗಳು ಮತ್ತು ಬಯೋಪಿಕ್ ನಲ್ಲಿ ನಟಿಸುವ ಆಸೆ ಇದೆ. ಅದರ ಹೊರತಾಗಿಯೇ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳಲಾರೆ ಮತ್ತು ಭಾಗಿ ಆಗಲಾರೆ ಎಂದು ಕಂಗನಾ ಹೇಳಿದ್ದರು. ಇದೀಗ ಅವಕಾಶ ಸಿಕ್ಕರೆ ಸ್ಪರ್ಧಿಸ್ತೇನೆ ಎಂದಿದ್ದಾರೆ.