ಬೆಂಗಳೂರು : ಬಿಎಸ್‌ವೈ ಸಂಪುಟದಲ್ಲಿ 7 ತಿಂಗಳು ಕೋವಿಡ್‌ನಲ್ಲಿ ಹೋಯ್ತು. ನಾನೆಲ್ಲಿ ಅಕ್ರಮ ಮಾಡಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದೇನೆ ಅನ್ನೋದನ್ನ ಕಾಂಗ್ರೆಸ್ ಸಾಬೀತು ಮಾಡಿದ್ರೆ, ಅಷ್ಟೆಲ್ಲಾ ಆಸ್ತಿಯನ್ನ ದಾನ ಮಾಡ್ತೀನಿ ಎಂದರು. ನಾನು ನನ್ನ ಆಸ್ತಿ ವಿವರವನ್ನ ಲೋಕಾಯುಕ್ತಕ್ಕೆ ಅಪ್ಡೇಟ್ ಮಾಡ್ತೀನಿ. ನಾನು ಘೋಷಣೆ ಮಾಡಿದಕ್ಕಿಂತ ಬೇರೆ ಆಸ್ತಿ ಇದೆ ಎಂದಾದ್ರೆ, ಅಕ್ರಮ ಆಸ್ತಿ ಗಳಿಸಿದ್ದೇನೆ ಎಂಬುದನ್ನ ಕಾಂಗ್ರೆಸ್ ಸಾಬೀತು ಮಾಡಿದ್ರೆ, ಅಷ್ಟನ್ನೂ ದಾನ ಮಾಡ್ತೀನಿ ಎಂದಿದ್ದಾರೆ.
`ಸಿಬಿಐ ದಾಳಿ ರಾಜಕೀಯ ಪ್ರೇರಿತ’ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ, ಇ.ಡಿ, ಐಟಿ, ಸಿಬಿಐ ಬಿಜೆಪಿ ಬಂದ ಮೇಲೆ ಪ್ರಾರಂಭವಾಗಿದ್ಯಾ? ಪ್ರಾಮಾಣಿಕರು ಭಯ ಪಡುವ ಅವಶ್ಯಕತೆ ಇಲ್ಲ. ಪ್ರಾಮಾಣಿಕರಿಗೆ ಸಿಬಿಐ, ಇ.ಡಿ ಏನು ಮಾಡುತ್ತೆ? ಪ್ರಾಮಾಣಿಕವಾಗಿದ್ದರೆ ಡಿಕೆಶಿ ಹೆದರುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಬದಲಾವಣೆ ಜಗದ ನಿಯಮ, ಆದ್ರೆ ಬದಲಾವಣೆ ಚುನಾವಣೆಗೆ ಆಗಬಾರದು. ಹಿಂದೂ ಎಂದಿಗೂ ಭಯೋತ್ಪಾದಕ ಆಗಲಾರ. ಹಿಂದೂ ರಕ್ತದಲ್ಲಿ ಸರ್ವಧರ್ಮ ಸಹಬಾಳ್ವೆ ಇದೆ. ಭಯೋತ್ಪಾದನೆ ಮಾಡುವವರನ್ನ ಕಂಡರೆ ಅವರಿಗೆ ಭಯ ಇರಬೇಕು. ವೋಟಿನ ಆಸೆಗೆ ಅಂತಹವರನ್ನ ಬೆಳೆಸುವ ಕೆಲಸ ಆಗಬಾರದು. ಕುಂಕುಮದ ಬಗ್ಗೆ ಪ್ರೀತಿ ಶಾಶ್ವತವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.