ಮಂಡ್ಯ : ನಾಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದ್ದು, ಸಭೆಯಲ್ಲಿ ನೀರು ಬಿಡುವಂತೆ ಆದೇಶ ಬಂದ್ರೆ ತಮಿಳುನಾಡಿಗೆ ನೀರು ಹರಿಸೋದು ಫಿಕ್ಸ್ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ನಗರದ ಕೀಲಾರದಲ್ಲಿ ನಡೆದ ಅಭಿನಂದನಾ ಸಂಮಾರಂಭದಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ, ಸೆಪ್ಟೆಂಬರ್ 17 ರಂದು ಕಾವೇರಿ ಪ್ರಾಧಿಕಾರಣ ಸಭೆ ನಡೆಯಲಿದ್ದು, ಇದೆ ತಿಂಗಳ 21 ರಂದು ಕಾವೇರಿ ನೀರು ವಿಚಾರ ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಇದೆ. ಇಲ್ಲಿ ತಮಿಳುನಾಡಿಗೆ ನೀರು ಬಿಡಲೇ ಬೇಕೆಂದು ತೀರ್ಮಾನವಾದರೆ, ಕೆ ಆರ್ ಎಸ್ ಡ್ಯಾಮ್ ನಿಂದ ನೀರು ಹರಿಸಲೇ ಬೇಕಾಗುತ್ತದೆ. ಇದರಿಂದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಆತಂಕ ಉಂಟಾಗಿದೆ. ಸುಪ್ರೀಂಕೋರ್ಟ್ ನಿಂದ ಆದೇಶ ಬಂದರೆ ಅದರ ತೀರ್ಪಿನ ವಿರುದ್ಧ ನಡೆಯಲು ಸಾಧ್ಯವಿಲ್ಲ. ಪ್ರಾಧಿಕಾರದ ಸಭೆಯಲ್ಲಿ ಬಿಡಬೇಕೆಂದಿರುವ ನೀರನ್ನ ಕಡಿಮೆ ಮಾಡಿದ್ರೆ ಸಂತೋಷ, ಇಲ್ಲ ಜಿರೋ ಕ್ಯೂಸೆಕ್ ಮಾಡಿದ್ರೆ ಇನ್ನು ಸಂತೋಷ ಎಂದರು.
ಇದನ್ನೂ ಓದಿ : ಸರ್ವಪಕ್ಷ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಹೊರಟು ನಿಂತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು
ದೇವೇಗೌಡರ ಬಗ್ಗೆ ಮಾತನಾಡುವ ಮುಟ್ಟಾಳ ನಾನಲ್ಲ ಎಂದ ಅವರು, ದೇವೇಗೌಡರ ಅಭಿವೃದ್ದಿ, ಸಾಧನೆ ಬಗ್ಗೆ ಟೀಕೆ ಮಾಡುವಷ್ಟು ದೊಡ್ಡವನು ನಾನಲ್ಲ. ಪಕ್ಷದ ಮೈತ್ರಿ ಬಗ್ಗೆ ಅಮಿತ್ ಶಾ, ಮೋದಿ ಜೊತೆ ಮಾತನಾಡುವ ಅವರಿಗೆ ಕಾವೇರಿ ವಿಚಾರದ ಬಗ್ಗೆ ಎಂಪಿಗಳನ್ನ ಕರೆದುಕೊಂಡು ಹೋಗಿ ಸಿಎಂ ನೇತೃತ್ವದ ರಾಜ್ಯದ ನಿಯೋಗ ಪ್ರಧಾನಿ ಭೇಟಿಗೆ ಟೈಂ ಕೇಳಬೇಕಿತ್ತು. ಏಕೆಂದರೆ ಕಾವೇರಿ ಅಚ್ಚುಕಟ್ಟಿನ ರೈತರು ತೊಂದರೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ನಿಯೋಗಕ್ಕೆ ಸಮಯ ಕೊಡದಿದ್ದರೆ ಹೇಗೆ ಪ್ರಧಾನ ಮಂತ್ರಿಗಳೆ ಎಂದು ಇವರು ಕೇಳಬೇಕಿತ್ತು. ಹಾಗೆ ಕೇಳಿದ್ದರೆ ನಮಗೆ ದೊಡ್ಡ ಶಕ್ತಿ ಬಂದಿರೋದು. ಪಕ್ಷದ ಶಕ್ತಿ ಬೆಳಸೋಕೆ ಅಮಿತ್ ಶಾ ಬಳಿ ಹೋದವರು, ಕಾವೇರಿ ವಿಚಾರ ಯಾಕೆ ಮಾತಾಡಿಲ್ಲ ಅಂತ ನನ್ನ ಪ್ರಶ್ನೆ ಅಷ್ಟೇ, ಅದನ್ನ ಬಿಟ್ಟು ಬೇರೆ ಏನು ದೂಷಣೆ ಮಾಡಲ್ಲ ಎಂದಿದ್ದಾರೆ.
ಇದನ್ನೂ ಓದಿ : PM Modi Birthday Special: ಪಿಎಂ ಮೋದಿ ಹುಟ್ಟುಹಬ್ಬದ ವಿಶೇಷ : ಪ್ರಯಾಣಿಕರಿಗೆ ಡಿಸ್ಕೌಂಟ್ ನೀಡಿದ ಆಟೋ ಚಾಲಕರು
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.