Tuesday, March 28, 2023
spot_img
- Advertisement -spot_img

ಪಕ್ಷ ನನಗೆ ಯಾವುದೇ ಸವಾಲು ಕೊಟ್ಟರೂ ನಿಭಾಯಿಸುತ್ತೇನೆ : ಬಿ ವೈ‌ ವಿಜಯೇಂದ್ರ

ಮೈಸೂರು: ಪಕ್ಷ ನನಗೆ ಯಾವುದೇ ಸವಾಲು ಕೊಟ್ಟರೂ ನಿಭಾಯಿಸುತ್ತೇನೆ, ಸ್ಪರ್ಧೆಯಲ್ಲಿ ಪಕ್ಷದ ತೀರ್ಮಾನವೇ ಅಂತಿಮ ಎಂದು ಬಿ ವೈ‌ ವಿಜಯೇಂದ್ರ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ಸ್ಪರ್ಧೆಯಲ್ಲಿ ಪಕ್ಷದ ತೀರ್ಮಾನವೇ ಅಂತಿಮವಾಗಿದ್ದು, ಎಲ್ಲಾ ಸವಾಲುಗಳನ್ನು ನಾನು ಎದುರಿಸುತ್ತೇನೆ. ನಾನು ವರುಣಾ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.ಪಕ್ಷ ಒಪ್ಪಿದರೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ‌ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದರು.

ಎಲ್ಲಾ ಸವಾಲುಗಳನ್ನು ನಾನು ಎದುರಿಸುತ್ತೇನೆ. ನಾನು ವರುಣಾ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆ ಮಾಡುತ್ತಿದ್ದೇನೆ. ಮೋದಿ ಎಂಬುದು ಬರಿ ಅಲೆ ಅಲ್ಲ, ಅದೊಂದು ಸುನಾಮಿ, ಕಾಂಗ್ರೆಸ್ ನವರಿಗೆ ಇನ್ನೂ ಅರ್ಥವಾಗಿಲ್ಲ. ಕಾಂಗ್ರೆಸ್ ಭ್ರಮೆಯಲ್ಲಿದೆ. ಭ್ರಮೆಯಲ್ಲಿರುವ ಕಾರಣ ಗುಜರಾತ್ ಫಲಿತಾಂಶದ ಎಫೆಕ್ಟ್ ಕರ್ನಾಟಕದಲ್ಲಿ ಆಗಲ್ಲ ಎಂದು ಹೇಳುತ್ತಿದೆ. ಚುನಾವಣೆ ನಂತರ ಕಾಂಗ್ರೆಸ್ಗೆ ಉತ್ತರ‌ ಸಿಗಲಿದೆ ಎಂದು ಹೇಳಿದರು.

ಇನ್ನೂ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಪಡೆಯಲು ಹೋರಾಟ ಮಾಡುತ್ತಿದ್ದೇವೆ. ಹೀಗಾಗಿ ಇಲ್ಲಿ ಸಂಘಟನೆ ಹೆಚ್ಚು ಮಾಡಿದ್ದೇವೆ ಎಂದರು. ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಿ ಎಂದು ಪಕ್ಷ ಸೂಚಿಸಿದರೆ ನಾನು ಹಿಂದೆ ಸರಿಯುವುದಿಲ್ಲ, ನನ್ನ ವೈಯಕ್ತಿಕ ಆಸೆಗಳೇನಿದ್ದರೂ ವೈಯಕ್ತಿಕವಾದಂತಹದ್ದು ಎಂದು ಸಚಿವ ಶ್ರೀರಾಮುಲು ಹೇಳಿದ್ದರು.

Related Articles

- Advertisement -

Latest Articles