ಬೆಂಗಳೂರು: ಕೋಲಾರ ಸಿದ್ದರಾಮಯ್ಯಗೆ ಸೇಫ್ ಅಲ್ಲ. ಅವರು ಕೋಲಾರದಲ್ಲಿ ನಿಂತರೇ ಸೋಲ್ತಾರೆ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಕೋಲಾರಕ್ಕಿಂತ ಸಿದ್ದರಾಮಯ್ಯ ವರುಣಾದಲ್ಲಿ ನಿಲ್ಲೋದು ಉತ್ತಮ, ಕೋಲಾರದಲ್ಲಿ ಎಂದೂ ಕಾಂಗ್ರೆಸ್ ಗೆಲ್ಲಲ್ಲ. ಕಾಂಗ್ರೆಸ್ ಮುಕ್ತ ಕೋಲಾರ ಆಗುತ್ತೆ. ಸಿದ್ದರಾಮಯ್ಯರನ್ನು ಕರೆದುಕೊಂಡು ಹೋದ್ರೆ ಏನಾದ್ರೂ ಉಪಯೋಗ ಆಗುತ್ತೆ ಎಂದು ಕರೆದು ಕೊಂಡು ಹೋಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರಿಗಾದ್ರೂ ಬುದ್ದಿ ಇರಬೇಕಾಗಿತ್ತು. 7 ಬಾರೀ ಗೆದ್ದ ಒಬ್ಬ ದಲಿತರನ್ನು ಸೋಲಿಸಿದ್ದಾರೆ. ಮುನಿಯಪ್ಪ ಹೇಳಿದ್ರು ಅವರಿಗೆ ವೋಟ್ ಹಾಕಲ್ಲ. ಸಿದ್ದರಾಮಯ್ಯ ಅವರಿಗೆ ಎಲ್ಲಾ ಗೊತ್ತಿದೆ ನಾನು ಹೇಳಿದ್ದೇನೆ ಅದರ ಮೇಲೆ ಅವರ ಇಚ್ಚೆ. ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಇರಬೇಕು ಎಂದು ಬಯಸುವವನು ನಾನು ಎಂದು ಹೇಳಿದರು.
ದಯವಿಟ್ಟು ಅವರು ನಮ್ಮ ಸ್ನೇಹಿತರು ಯಾವುದೇ ಪಕ್ಷದಲ್ಲಿ ಇದ್ರೂ ನಮಗೆ ಅವರ ಮೇಲೆ ಪ್ರೀತಿ ಇದೆ. ಅವರನ್ನು ಮೋಸ ಮಾಡಲು ಕೋಲಾರಕ್ಕೆ ಕರೆದುಕೊಂಡು ಹೋಗಿದ್ದಾರೆ. ಯಾವುದೇ ರೀತಿ ನೋಡಿದ್ರು ಗೆಲ್ಲುವ ಮಟ್ಟ ಕಾಣುತ್ತಿಲ್ಲ. ಅಲ್ಲಿ ಮುಸ್ಲಿಂ ಜಾತಿ ನೋಡಿ ವೋಟ್ ಹಾಕಲ್ಲ, ಸಿದ್ಧಾಂತ ನೋಡಿ ಮತ ಹಾಕೋರು ಇದ್ದಾರೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಮುನಿಯಪ್ಪ ಕೂಯ್ಯೋದು ಗೊತ್ತಾಗೋದೆ ಇಲ್ಲ. ಆಗಲಿ, ಆಗಲಿ ಎಂದು ಕೆಲಸ ಮಾಡುತ್ತಾರೆ. ಕೋಲಾರದಲ್ಲಿ ಎಂದೂ ಕಾಂಗ್ರೆಸ್ ಗೆಲ್ಲಲ್ಲ. ಕಾಂಗ್ರೆಸ್ ಮುಕ್ತ ಕೋಲಾರ ಆಗುತ್ತೆ ಎಂದರು.