ಬಳ್ಳಾರಿ : ಸಚಿವ ಶಿವಾನಂದ ಪಾಟೀಲ್ ಅವರು ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಶ್ರೀರಾಮುಲು, ಅವರಿಗೇನಾದ್ರೂ ಹುಚ್ಚು ಹಿಡಿದಿದೆಯಾ ಗೊತ್ತಾಗ್ತಿಲ್ಲ, ಹುಚ್ಚು ಹಿಡಿದಿದ್ರೆ ಮೆಂಟಲ್ ಆಸ್ಪತ್ರೆಗೆ ಸೇರಿಸಿ ಎಂದು ಸಲಹೆ ನೀಡಿದ್ದಾರೆ.
ರೈತರ ಬಗ್ಗೆ ಹಗುರವಾಗಿ ಮಾತನಾಡಿರುವ ಅವರಿಗೆ ಸ್ವಲ್ಪ ಆದ್ರೂ ಜ್ಞಾನ ಇರಬೇಕಲ್ಲ. ಅಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡ್ರೆ, ಒಬ್ಬರಾದರೂ ರೈತರ ಮನೆಗೆ ಹೋಗಿ ಅವರ ಕಷ್ಟ ಕೇಳಿದ್ದೀರಾ? ಸಚಿವರಿಗೆ ಹುಚ್ಚು ಹಿಡಿದೆದೆಯಾ ಗೊತ್ತಾಗುತಿಲ್ಲ. ಕಾಂಗ್ರೆಸ್‌ನವರು ಗ್ಯಾರಂಟಿ ಹಾಗೂ ಲಾಟ್ರಿ ಮೂಲಕ ಗೆದ್ದಿದ್ದಾರಾ? ಎಂದು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ : ಸಚಿವರು ಆತ್ಮಹತ್ಯೆ ಮಾಡಿಕೊಳ್ಳಲಿ, ನಾವೇ 50 ಕೋಟಿ ಕೊಡ್ತೇವೆ: ಕಬ್ಬು ಬೆಳೆಗಾರರ ಆಕ್ರೋಶ
ಉದಯನಿಧಿ ದಕ್ಷಿಣದ ಪಪ್ಪು: ಕಾವೇರಿ ಹೋರಾಟದ ಬಗ್ಗೆ ಮಾತನಾಡಿದ ಅವರು, ಇಷ್ಟು ದಿನ ಕಾವೇರಿ ನೀರು ಕರ್ನಾಟಕಕ್ಕೆ ಮೊದಲ ಆದ್ಯತೆಯಾಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಎಲ್ಲಾ ಸೇರಿ, ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಬಿಜೆಪಿ ಸರ್ಕಾರ ಮನಸ್ಸು ಮಾಡಿದ್ರೆ ಕಾವೇರಿ ನೀರು ಬಿಡದೇ ಮುಂದೂಡಬಹುದಿತ್ತು. ಸ್ಟಾಲಿನ್ ‘ಇಂಡಿಯಾ’ ಒಕ್ಕೂಟದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಅವರಿಗೆ ನೀರು ಬಿಟ್ಟಿದ್ದಾರೆ. ರಾಹುಲ್ ಗಾಂಧಿ ಉತ್ತರದ ಪಪ್ಪು ಆದ್ರೆ, ಉದಯನಿಧಿ ದಕ್ಷಿಣ ಭಾರತದ ಪಪ್ಪು. ಈ ಪಪ್ಪುಗಳೆಲ್ಲ ಸೇರಿಕೊಂಡು ಮೋದಿ ಸರ್ಕಾರ ಬರಬಾರದು ಎಂದು ಒಕ್ಕೂಟ ಮಾಡಿಕೊಂಡಿದ್ದಾರೆ. ಎಂದು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಬಿಜೆಪಿಯಿಂದ 20 ಜನ ಬರ್ತಾರೆ, ಅವರಿಂದ ಲೋಕ ಚುನಾವಣೆ ಮಾಡ್ತೀವಿ : ರಾಜು ಕಾಗೆ
‘ಸೂರ್ಯ, ಚಂದ್ರ ಇರೋದೆಷ್ಟು ಸತ್ಯನೋ 2024ರಲ್ಲಿ ಮೋದಿಜಿ ಮತ್ತೆ ಪ್ರಧಾನಿ ಆಗೋದು ಅಷ್ಟೇ ನಿಜ. ಇಂಡಿಯಾ ಎನ್ನುವುದು ಬ್ರಿಟೀಷರು ಇಟ್ಟಿರೋ ಹೆಸರು, ನಿಮ್ಮ ಇಂಡಿಯಾ ಒಕ್ಕೂಟಕ್ಕೆ ನಾವು ಜಗ್ಗಲ್ಲ. ನಿಮಗೆ ಹೆದರಿ ದೇಶದ ಹೆಸರು ಬದಲಾಯಿಸುತ್ತಿಲ್ಲ. ದೇಶಕ್ಕೆ ಭಾರತ ಎಂಬ ಹೆಸರಿಡುವ ಬಗ್ಗೆ ಮೊದಲಿನಿಂದಲೂ ಬೇಡಿಕೆ ಇದೆ. ಎಂದು ಇಂಡಿಯಾ ಮರು ನಾಮಕರಣ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.