ನವದೆಹಲಿ : ‘ನಿಮಗೆ ಇನ್ನಷ್ಟು ಚಿರತೆಗಳು ಬೇಕಿದ್ದರೆ ಚಿರತೆಗಳ ಮನೆಗೆ ಬನ್ನಿ’ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಾಫೋಸಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಭಾಷಣಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನಾವು ಭಾರತಕ್ಕೆ ಚಿರತೆಗಳನ್ನು ದಾನ ಮಾಡಲು ಸಿದ್ದರಿದ್ದೇವೆ. ನಾವು ಈಗಾಗಲೇ ಕಳಿಸಿದ ಚಿರತೆಗಳು ಆರೋಗ್ಯವಾಗಿ ತಲುಪಿವೆ ಮತ್ತು ಆರೋಗ್ಯವಾಗಿ ಇವೆ ಎಂದು ಹೇಳಿದ್ದೀರಿ. ನಿಮಗೆ ಇನ್ನಷ್ಟು ಚಿರತೆಗಳು ಬೇಕಿದ್ದರೆ ನಮ್ಮ ಚಿರತೆಗಳ ಮನೆಗೆ ಬನ್ನಿ, ಕೊಡಲು ನಾವು ಸಿದ್ದ ಎಂದಿದ್ದಾರೆ.
ನವೆಂಬರ್ 2022 ರಲ್ಲಿ ನಮೀಬಿಯಾದಿಂದ ತರಲಾದ ಎಂಟು ಚಿರತೆಗಳ ಜೊತೆಗೆ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ 12 ಚಿರತೆಗಳನ್ನು ಭಾರತಕ್ಕೆ ಕಳುಹಿಸಿದೆ. ಈ ಪೈಕಿ ಒಂಬತ್ತು ಚಿರತೆಗಳು (ಭಾರತದಲ್ಲಿ ಜನಿಸಿದ ಮೂರು ಮರಿಗಳು ಸೇರಿದಂತೆ) ಸಾವನ್ನಪ್ಪಿದ್ದರೆ, ಕುನೊದಲ್ಲಿ 15 ಚಿರತೆಗಳು ಉಳಿದುಕೊಂಡಿವೆ (ಇದರಲ್ಲಿ ಹೆಣ್ಣು ಮರಿ ಸೇರಿದೆ). ಹೆಚ್ಚಿನ ಸಾವುಗಳು ಬ್ಯಾಕ್ಟೀರಿಯಾದ ಸೋಂಕು, ಹುಳುಗಳು, ಮೂತ್ರಪಿಂಡ ವೈಫಲ್ಯ, ಗಾಯಗಳು ಮತ್ತು ಶಾಖದಿಂದ ಸಂಭವಿಸಿವೆ.
ಜನವರಿ 26 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಮುಂದಿನ ದಶಕದಲ್ಲಿ 100 ಚಿರತೆಗಳನ್ನು ಭಾರತಕ್ಕೆ ಸ್ಥಳಾಂತರಿಸಲು ದಕ್ಷಿಣ ಆಫ್ರಿಕಾ ಒಪ್ಪಿಕೊಂಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.