Thursday, September 28, 2023
spot_img
- Advertisement -spot_img

9ನೇ ತರಗತಿ ಓದಿದ ಚೆನ್ನಿ ಶಾಸಕನಾಗಿದ್ದು ಹೇಗೆ? ಪ್ರಖರ ಹಿಂದುವಾದಿ ಎಸ್ ಎನ್ ಚನ್ನಬಸಪ್ಪ ಬೆಳೆದು ಬಂದ ದಾರಿ ಹೇಗಿತು?

ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ರಾಜಕಾರಣಿ, ಹಿಂದೂತ್ವ ತತ್ವದಡಿಯಲ್ಲಿ ಪಳಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಬೆಳೆದಿರುವ ರಾಜಕಾರಣಿ ಎಸ್. ಎನ್. ಚನ್ನಬಸಪ್ಪ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಇವರು ಪ್ರಬಲ ಹಿಂದುತ್ವದ ಪ್ರತಿಪಾದಕರಾಗಿದ್ದಾರೆ.

ನಿಂಗಪ್ಪ ಹಾಗೂ ನಾಗರತ್ನಮ್ಮ ದಂಪತಿಯ ನಾಲ್ಕನೆಯ ಪುತ್ರನಾಗಿ 8-07-1963ರಲ್ಲಿಜನಿಸುತ್ತಾರೆ. ಕೇವಲ ಒಂಭತ್ತನೆಯ ತರಗತಿಯನ್ನು ಓದಿರುವ ಇವರು ಬಾಲ್ಯದಿಂದಲೇ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡಿದ್ದ ಇವರರು, ರಾಷ್ಟ್ರೀಯ ಸ್ವಯ ಸೇವಕ ಸಂಘದ ನೆರಳಿನಲ್ಲಿ ಬೆಳೆದರು.

ಸಂಘದ ಪರಿಪಾಲಕ ಚೆನ್ನಿ (ಚನ್ನಬಸಪ್ಪ)..

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ತತ್ವ ಹಾಗೂ ಆದರ್ಶಗಳು ಮುಂದೆ ಇವರ ಸಮಾಜಮುಖಿ ಜೀವನಕ್ಕೆ ಅಡಿಪಾಯಗಳಾದವು. ‘ಚೆನ್ನಿ’ ಎಂತಲೂ ಕರೆಯಲಾಗುವ ಇವರು ನಂತರ ಶಿವಮೊಗ್ಗದ ಕೋಟೆ ಯುವಕರ ಸಂಘದ ಸದಸ್ಯರಾಗಿಯೂ, ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರ ಹಿಂದೂಪರ ನಿಲುವುಗಳಿಂದ, ಹಿಂದೂ ಸಂಘಟನಾ ಮಹಾಮಂಡಳಿಯ ನಿರ್ದೇಶಕರಾಗಿ ಹಾಗೂ ಸಹ ಕಾರ್ಯದರ್ಶಿಯಾಗಿ ನಾನಾ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಒಂಭತ್ತನೆ ತರಗತಿಯಿಂದ ಶಾಸಕ ಸ್ಥಾನದವರೆಗೆ ಚೆನ್ನಿ..

ಬಳಿಕ 1980 ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡುವ ಇವರು, ಭಾರತೀಯ ಜನತಾ ಪಾರ್ಟಿಯ ನಗರ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪ್ರಭಾರಿ ಸೇರಿದಂತೆ ಹೀಗೆ ಪಕ್ಷದ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

1992 -1998 ಹಾಗೂ 2008ರಲ್ಲಿ ಮೂರು ಬಾರಿ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿ 2012ರಲ್ಲಿ ನಗರಸಭಾ ಅಧ್ಯಕ್ಷರಾಗಿ ಅಧಿಕಾರವನ್ನು ಅನುಭವಿಸಿದ್ದಾರೆ. ಅಲ್ಲದೆ 2006ರಲ್ಲಿ ಶಿವಮೊಗ್ಗ-ಭದ್ರಾವತಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಾಗೂ 2018ರಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ ಮಹಾನಗರ ಪಾಲಿಕೆಯ ಉಪಮೇಯರಾಗಿ, ಹಾಗೂ ಆಡಳಿತ ಪಕ್ಷದ ನಾಯಕರಾಗಿದ್ದರು.

ವಿವಾದಗಳೊಂದಿಗೆ ಚೆನ್ನಿ ನಂಟು..

ಶಿವಮೊಗ್ಗ ಸಿಟಿ ಮುನ್ಸಿಪಲ್ ಕೌನ್ಸಿಲ್ ಮತ್ತು ನಂತರ ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಲವು ಬಾರಿ ಚುನಾಯಿತರಾದ ಶ್ರೀ ಚನ್ನಬಸಪ್ಪ ಅವರು ಹಿಂದುತ್ವ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ .

2015ರ ನವೆಂಬರ್ 2 ರಂದು, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೋಮಾಂಸ ಸೇವನೆಯ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆಯ ಸಂದರ್ಭದಲ್ಲಿ, ಚನ್ನಬಸಪ್ಪ ಅವರು ಶಿವಮೊಗ್ಗದಲ್ಲಿ ‘ಗೋಮಾಂಸ ಸೇವಿಸಲು ಧೈರ್ಯಮಾಡಿದರೆ ಶ್ರೀ ಸಿದ್ದರಾಮಯ್ಯನವರ ತಲೆ ಕತ್ತರಿಸುವುದಾಗಿ’ ಹೇಳಿಕೆ ನೀಡಿದ್ದರು. ಬಳಿಕ ಧರ್ಮದ ಆಧಾರದ ಮೇಲೆ ದ್ವೇಷ ಮತ್ತು ಕ್ರಿಮಿನಲ್ ಬೆದರಿಕೆ ಮತ್ತಿತರ ಆರೋಪದಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ನವೆಂಬರ್ 3ರಂದು ಬಂಧಿಸಲಾಗಿತ್ತು.

ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದ ಚನ್ನಬಸಪ್ಪ ಅವರ ಕುತೂಹಲಕಾರಿಯಾದ ಆ ವೇಳೆಯಲ್ಲಿ ವಿವಾದಾತ್ಮಕ ಹೇಳಿಕೆಗಳ ಕಾರಣ ಬಿಜೆಪಿ ಅವರಿಂದ ಅಂತರವನ್ನು ಕಾಯ್ದುಕೊಂಡಿತ್ತು. ಹಿಂದುತ್ವವಾದಿ ಹರ್ಷ ಹತ್ಯೆ ಪ್ರಕರಣ ಮತ್ತು ಬುರ್ಖಾ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆಗಳಲ್ಲಿ ಚನ್ನಬಸಪ್ಪ ಮುಂಚೂಣಿಯಲ್ಲಿದ್ದರು.

ಕಳೆದ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಇವರು ಜಿಲ್ಲೆಯಲ್ಲಿ ಹಿಂದೂಪರ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles