ಭೋಪಾಲ್: ಪಾಕ್ ಮಾಜಿ ಸಿಎಂ ಇಮ್ರಾನ್ ಖಾನ್ ಪಕ್ಷದ ಹಾಡನ್ನು ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಪ್ರಚಾರಕ್ಕೆ ಬಳಸಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಜನಾಕ್ರೋಶ ಯಾತ್ರೆಯಲ್ಲಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ನ ಥೀಮ್ ಹಾಡನ್ನು ಬಳಿಸಿಕೊಂಡಿದೆ ಬಿಜೆಪಿ ಹೇಳಿಕೊಂಡಿದೆ.
ಆದರೆ ಕಾಂಗ್ರೆಸ್ ಈ ಆರೋಪಕ್ಕೆ ಪ್ರತಿಕ್ರಿಯಿಸಿ, ಪಾಕಿಸ್ತಾನಿ ಪಕ್ಷದ ಹಾಡನ್ನು ಹರಿಯಾಣದ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ದುಶ್ಯಂತ್ ಚೌತಾಲಾ ಮತ್ತು ಅದೇ ರೀತಿ ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರಕ್ಕಾಗಿ ಕದ್ದಿದ್ದಾರೆ ಎಂದಿದೆ.
ಇದನ್ನೂ ಓದಿ: ‘ಬಿಜೆಪಿ ಜೊತೆ ಮೈತ್ರಿ ಇಲ್ಲ’; ಶಾಕ್ ಕೊಟ್ಟ ಎಐಎಡಿಎಂಕೆ!
“ಚಲೋ, ಚಲೋ ಇಮ್ರಾನ್ ಕೆ ಸಾಥ್” ಅನ್ನು ಕಾಂಗ್ರೆಸ್ ನಕಲು ಮಾಡಿದೆ ಎಂದು ಸಂಸದ ಬಿಜೆಪಿ ಘಟಕದ ಕಾರ್ಯದರ್ಶಿ ರಾಹುಲ್ ಕೊಠಾರಿ ಆರೋಪಿಸಿದ್ದರು. ಅಲ್ಲದೆ ಈ ಕುರಿತು ಟ್ವೀಟ್ (ಎಕ್ಸ್) ಮಾಡಿರುವ ಮಧ್ಯಪ್ರದೇಶ ಬಿಜೆಪಿ ಪಾಕಿಸ್ತಾನ್ ಇಮ್ರಾನ್ ಖಾನ್ ಪಕ್ಷದ ಹಾಡು ಹಾಗೂ ಕಾಂಗ್ರೆಸ್‌ನ ಹಾಡನ್ನು ಹಂಚಿಕೊಂಡಿದೆ.
“ಕಾಂಗ್ರೆಸ್‌ನ ಪಾಕಿಸ್ತಾನ ಪ್ರೇಮ ಮತ್ತೆ ಮುನ್ನೆಲೆಗೆ ಬಂದಿದೆ. ಮಧ್ಯಪ್ರದೇಶ ಚುನಾವಣೆಯಲ್ಲಿ ತನ್ನ ಪ್ರಚಾರದ ಹಾಡಿಗೆ ಇಮ್ರಾನ್ ಖಾನ್ ಅವರ ಪಾಕಿಸ್ತಾನದ ಥೀಮ್ ಹಾಡನ್ನು ಕದ್ದಿದೆ. ಕಾಂಗ್ರೆಸ್‌ನ ‘ಕಳ್ಳತನ’ದ ಅಭ್ಯಾಸ ಹಳೆಯದು, ಆದರೆ ಪಾಕಿಸ್ತಾನದ ಮೇಲೆ ಏಕೆ ಅಷ್ಟೊಂದು ಪ್ರೀತಿ? ಕಾಂಗ್ರೆಸ್ ಉತ್ತರಿಸಬೇಕು” ಎಂದು ಬಿಜೆಪಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ: Eknath Shinde : ಸಿಂಹದ ಎದುರು ಕುರಿ-ಮೇಕೆಗಳು ಹೋರಾಡಲು ಸಾಧ್ಯವಿಲ್ಲ; ಶಿಂಧೆ
ಇಲ್ಲಿಯವರೆಗೆ ಪಾಕಿಸ್ತಾನದ ಪರವಾಗಿ ಮತ್ತು ಹಿಂದೂಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗುವವರನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿತ್ತು ಎಂದು ಕೊಠಾರಿ ಆರೋಪಿಸಿದ್ದಾರೆ. ಈಗ ಮಧ್ಯಪ್ರದೇಶ ಕಾಂಗ್ರೆಸ್ ಕೂಡ ಪಾಕಿಸ್ತಾನದ ಹಾಡುಗಳನ್ನು ಎರವಲು ಪಡೆಯುತ್ತಿದೆ ಎಂದು ಆರೋಪಿಸಿದರು.
ಶೀಘ್ರದಲ್ಲೇ ಕಾಂಗ್ರೆಸ್ ಧ್ವಜವು ಸಂಪೂರ್ಣವಾಗಿ ಹಸಿರು ಬಣ್ಣಕ್ಕೆ ತಿರುಗಿದರೂ ಅಚ್ಚರಿಯಿಲ್ಲ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.