Wednesday, March 22, 2023
spot_img
- Advertisement -spot_img

ಈ ಬಾರಿಯ ಬಜೆಟ್​​ನಲ್ಲಿ ಮಹಿಳೆಯರು, ಯುವಕರಿಗೆ ಹೆಚ್ಚು ಆದ್ಯತೆ : ಸಿಎಂ ಬೊಮ್ಮಾಯಿ

ಬೆಂಗಳೂರು: ಜನವರಿ 17ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಸುತ್ತೇವೆ. ಬಜೆಟ್​​ ಅಧಿವೇಶನ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ.

ಸಂಪುಟ ಸಭೆಯಲ್ಲಿ ಬಜೆಟ್​ ಅಧಿವೇಶನದ ದಿನಾಂಕ ನಿಗದಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ಬಾರಿಯ ಬಜೆಟ್​​ನಲ್ಲಿ ಜನ ಕಲ್ಯಾಣಕ್ಕೆ ಹೆಚ್ಚು ಆದ್ಯತೆ ನೀಡಲು ಚಿಂತನೆ ನಡೆಸಿದ್ದೇವೆ. ದುಡಿಯುವ ವರ್ಗಕ್ಕೆ ಹೆಚ್ಚು ಆದ್ಯತೆ ನೀಡಲು ಚಿಂತಿಸಿದ್ದೇವೆ. ಸ್ತ್ರೀಶಕ್ತಿ ಸ್ವಹಾಯ ಸಂಘಗಳಿಗೆ 5 ಲಕ್ಷ ರೂ. ಸಾಲ ನೀಡುವ ಯೋಚನೆ ಇದೆ. ಈ ಬಾರಿಯ ಬಜೆಟ್​​ನಲ್ಲಿ ಮಹಿಳೆಯರು, ಯುವಕರಿಗೆ ಹೆಚ್ಚು ಆದ್ಯತೆ ನೀಡಲಾಗುವುದು ತಿಳಿಸಿದರು.

ಪ್ರತಿಯೊಂದು ಕುಟುಂಬಕ್ಕೆ ಮನೆ ಕೊಡಿಸುವ ಕಾರ್ಯಕ್ಕೆ ಹೆಣ್ಣು ಮಕ್ಕಳ ಹೆಸರಿನಲ್ಲಿ ಯೋಜನೆ ತರುತ್ತೇವೆ. ಸ್ತೀಶಕ್ತಿ, ಸ್ತ್ರೀ ಸಾಮರ್ಥ್ಯ ಯೋಜನೆ ತರುತ್ತೇವೆ. ವಿಶೇಷ ಯೋಜನೆ ಮಾಡುತ್ತೇವೆ ಎಂದರು.

ಉಚಿತವಾಗಿ ವಿದ್ಯುತ್​ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿರುವ ವಿಚಾರವಾಗಿ ಮಾತನಾಡಿದ ಅವರು ಉಚಿತವಾಗಿ 200 ಯೂನಿಟ್ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ. ಎಲ್ಲ ವಿದ್ಯುತ್​ ಸರಬರಾಜು ನಿಗಮಗಳನ್ನು ಕಾಂಗ್ರೆಸ್​ ಸಾಲದ ಸುಳಿಗೆ ಸಿಲುಕಿಸಿತ್ತು. ಕಾರ್ಯರೂಪಕ್ಕೆ ತರಲು ಆಗಲ್ಲ ಎಂಬುದು ಕಾಂಗ್ರೆಸ್​ಗೂ ಗೊತ್ತು ಎಂದು ಹೇಳಿದರು.

Related Articles

- Advertisement -

Latest Articles