Wednesday, November 29, 2023
spot_img
- Advertisement -spot_img

ನನ್ನ ಅನುಭವದಲ್ಲಿ ಇಷ್ಟು ಕಡುಭ್ರಷ್ಟ ಸರ್ಕಾರ ನಾನು ನೋಡಿಲ್ಲ: ಎಸ್.ಆರ್.ವಿಶ್ವನಾಥ್

ಯಲಹಂಕ: ಸರ್ಕಾರ ಬಂದ ಕೂಡಲೇ ಸಾರ್ವಜನಿಕ ವರ್ಗಾವಣೆಗೆ ಆದೇಶ ಮಾಡ್ತು. ಅಲ್ಲಿಂದಲೇ ಭ್ರಷ್ಟಾಚಾರ ಶುರುವಾಯ್ತು ಎಂದು ಯಲಹಂಕ ಶಾಸಕ‌ ಎಸ್.ಆರ್.ವಿಶ್ವನಾಥ್ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ.

ಸಿಎಂ‌ ಪುತ್ರ ಯತೀಂದ್ರ ಆಡಿಯೋ ವೈರಲ್ ವಿಚಾರವಾಗಿ ಮಾತನಾಡಿದ ಅವರು, ಸಾಕ್ಷಿ ಕೊಡಿ ಅಂದ್ರೆ ಮಾಧ್ಯಮ ಹಾಗೂ ವಿರೋಧ ಪಕ್ಷದ ಮುಂದೆ ಹಣ ಪಡೆದು ವರ್ಗಾವಣೆ ಮಾಡ್ತಾರಾ? ಅದು ಯಾಕಾಯ್ತು? ಒಂದೊಂದು ಸರ್ಕಲ್ ಗೆ ಒಂದೊಂದು ಕೋಟಿ 75 ಲಕ್ಷಕ್ಕೆ ಸೇಲ್ ಆಯ್ತು. ಅಷ್ಟು ಕೊಟ್ಟು ಬಂದು ಅವರು ಎಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡ್ತಾರೆ. ಸಣ್ಣ ಪೋಸ್ಟ್‌ಗಳಿಗೂ ಸಹ ಹಣ ಪಡೆದಿದ್ದಾರೆ ಅದಕ್ಕೆಲ್ಲ ಸಾಕ್ಷಿ ಮೊನ್ನೆ ಸಿಕ್ಕ ಆಡಿಯೋ ಎಂದರು.

ಸಿಎಂ ಮಗ ಸಿಎಂ ವ್ಯವಹಾರ ಎಲ್ಲವನ್ನೂ ಮಾಡ್ತಿದ್ದಾರೆ ಅಂತ ಎಲ್ಲೆಡೆ ಹೇಳ್ತಿದ್ದಾರೆ ಅದು ಸತ್ಯ. ಪ್ರೂ ಮಾಡಿದ್ರೆ ರಾಜೀನಾಮೆ ಕೊಡ್ತೇವೆ ಅನ್ನೋದು ಎಲ್ಲಾ ಮೆಲ್ನೋಟಕ್ಕೆ ಹೇಳುವುದು. ಅವರ ಆತ್ಮಸಾಕ್ಷಿಯನ್ನು ಅವರು ಪ್ರಶ್ನೆ ಮಾಡಿಕೊಳ್ಳಲಿ. ನನ್ನ ಅನುಭವದಲ್ಲಿ ಇಷ್ಟು ಕಡು ಭ್ರಷ್ಟ ಸರ್ಕಾರವನ್ನ ನಾನು ನೋಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಸುದ್ದಿಗೋಷ್ಠಿ ಕರೆದ ಮಾಜಿ ಸಂಸದ ಮುದ್ದಹನುಮೇಗೌಡ: ಮತ್ತೆ ‘ಕೈ’ ಹಿಡಿಯುವ ಸಾಧ್ಯತೆ

ವಿಪಕ್ಷ ನಾಯಕನ ಆಯ್ಕೆಯಿಂದ ಬಿಜೆಪಿಯಲ್ಲಿ ಅಸಮಧಾನ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ತೀರ್ಮಾನದಂತೆ ಶಾಸಕರ ಅಭಿಪ್ರಾಯದಂತೆ ಕೊಟ್ಟಿದ್ದಾರೆ ಅದನ್ನ ನಾವು ಒಪ್ಪಬೇಕು. ಬೆಂಗಳೂರಿನವರಿಗೆ ವಿಪಕ್ಷ ಸ್ಥಾನ‌ ಕೊಟ್ಟಿದ್ದಾರೆ. ಶಾಸಕರಾದಾಗಲಿಂದಲೂ ಮಂತ್ರಿ ಡಿಸಿಎಂ ಎಲ್ಲ ಅವರಿಗೆ ಕೊಡ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲ್ಲ ಉಪೇಕ್ಷೆ ಮಾಡ್ತಾರೆ. ಅವರು ಸರಿಯಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂದ್ರೆ ಪಕ್ಷಕ್ಕೆ ಅವರ ಘನತೆಗೆ ಕುಂದು ಬರುತ್ತೆ ಎಂದರು.

ಇದನ್ನೂ ಓದಿ: ವಿಡಿಯೋದಲ್ಲಿ ಸಿಎಂ ಪುತ್ರ ಯತೀಂದ್ರ ಹೇಳಿದ ವಿವೇಕಾನಂದ ಇವ್ರೇನಾ?

ಯಡಿಯೂರಪ್ಪ ಅವರು ಸಿಎಂ ಆಗಿದ್ರೆ ನಮಗೆ ಈ ದುಸ್ಥಿತಿ ಬರ್ತಿರಲಿಲ್ಲ. ನಾವು ಅಧಿಕಾರ ಪಕ್ಷದಲ್ಲಿ ಇರ್ತಿದ್ವಿ. ಅವರ ಕುಟಂಬ ರಾಜಕಾರಣ ಅಂತೆಲ್ಲ ಮಾತನಾಡಬಾರದು. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷರ ವಿರುದ್ದ ಮಾತನಾಡಿದಷ್ಟು ಅವರಿಗೆ ಡ್ಯಾಮೇಜ್ ಆಗುತ್ತೆ ಎಂದು ತಿಳಿಸಿದರು.

ಜಮೀರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜಮೀರ್ ಅನೇಕ ಕಾಂಟ್ರವರ್ಸಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಪಸಂಖ್ಯಾತ ನಾಯಕ ಎಂದು ಸಿಎಂ ಸಿದ್ದರಾಮಯ್ಯ ಓಟಿಗಾಗಿ ಅವರನ್ನು ಇಟ್ಟುಕೊಂಡಿದ್ದಾರೆ. ಕಾರ್ಪೊರೇಟರ್ ಆಗಲೂ ಕೂಡ ಅರ್ಹತೆ ಇಲ್ಲದ, ಸಂವಿಧಾನದ ಬಗ್ಗೆ, ವಿಧಾನ ಸಭೆಯ ನಡವಳಿಕೆಯ ಬಗ್ಗೆ ಅರಿವಿಲ್ಲದ ಒಬ್ಬ ಸಚಿವ ಎಂದರು.

́ನಾವು ನಮಸ್ಕಾರ ಮಾಡ್ತಿರೋದು ಸ್ಪೀಕರ್ ಸ್ಥಾನಕ್ಕೆ ಹೊರತು ಖಾದರ್ ಗೆ ಅಲ್ಲ́

ನಾವು ನಮಸ್ಕಾರ ಮಾಡುತ್ತಿರುವುದು ಸ್ಪೀಕರ್ ಸ್ಥಾನಕ್ಕೆ ಹೊರತು ಖಾದರ್ ಗೆ ಅಲ್ಲ. ಈ ರೀತಿಯ ದುರಹಂಕಾರದ ಮಾತಗಳು, ಸಂವಿಧಾನ ವಿರೋಧ ಮಾತುಗಳನ್ನು‌ ಆಡುತ್ತಿದ್ದಾರೆ. ತಕ್ಷಣ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ಇವರು ಸಮಾಜದಲ್ಲಿ ಜಾತಿಯ ವಿಷ ಬೀಜ ಬಿತ್ತುವಂತ ದೊಡ್ಡ ಕೋಮುವಾದಿ ಕಾಂಗ್ರೆಸ್ ಹಿತದೃಷ್ಟಿಯಿಂದ ತಕ್ಷಣ ಅವರನ್ನು ಸಂಪುಟದಿಂದ ಹೊರ ಹಾಕಬೇಕು ಎಂದು ಅಗ್ರಹಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles