Friday, September 29, 2023
spot_img
- Advertisement -spot_img

ಭಾರತವು ನನಗೆ ವಿಶ್ವದ ಅತ್ಯಂತ ಪ್ರಮುಖ ದೇಶ : ಯುಎಸ್ ಅಧ್ಯಕ್ಷ ಜೋ ಬೈಡೆನ್

ನವದೆಹಲಿ : ‘ಭಾರತವು ತನಗೆ ವಿಶ್ವದ ಅತ್ಯಂತ ಪ್ರಮುಖ ದೇಶ’ ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾಗಿ ಭಾರತದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.

ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ, ವ್ಯಾಪಾರ, ಪರಿಸರ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ನಿಕಟ ಸಹಯೋಗದ ಬಗ್ಗೆ ಒತ್ತಿ ಹೇಳಿದರು.

ಯುಎಸ್ ನಲ್ಲಿ ಭಾರತೀಯ ಅಮೆರಿಕನ್ನರ ಪೈಕಿ ಶೇ. 6ರಷ್ಟು ಜನರು ತೆರಿಗೆ ಪಾವತಿದಾರರಿದ್ದಾರೆ. ನಾನು ಭಾರತಕ್ಕೆ ರಾಯಭಾರಿಯಾಗಿ ಹೊರಟಾಗ, ಭಾರತವು ನನಗೆ ವಿಶ್ವದ ಅತ್ಯಂತ ಪ್ರಮುಖ ದೇಶ ಎಂದು ಬೈಡೆನ್ ಹೇಳಿದ್ದಾರೆ ಎಂದು ಎರಿಕ್ ಗಾರ್ಸೆಟ್ಟಿ ತಿಳಿಸಿದರು.

ಇದನ್ನೂ ಓದಿ : ಚಂದ್ರಯಾನ-3 : ದಕ್ಷಿಣ ಆಫ್ರಿಕಾದಿಂದಲೇ ಪಿಎಂ ಮೋದಿ ವೀಕ್ಷಣೆ

ಭಾರತ ಮತ್ತು ಯುಎಸ್ ತಂತ್ರಜ್ಞಾನದಿಂದ ವ್ಯಾಪಾರದವರೆಗೆ, ಪರಿಸರದಿಂದ ಮಹಿಳಾ ಸಬಲೀಕರಣದವರೆಗೆ, ಸಣ್ಣ ಉದ್ಯಮಗಳಿಂದ ಬಾಹ್ಯಾಕಾಶದವರೆಗೆ ಮಾತನಾಡುತ್ತಿದ್ದೇವೆ. ಆಕಾಶ ಮಾತ್ರ ನಮಗೆ ಮಿತಿ ಎಂದು ಹೇಳುತ್ತಿದ್ದೆವು. ಆದರೆ, ಈಗ ನಾವು ಬಾಹ್ಯಾಕಾಶದಲ್ಲಿಯೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಮಗೆ ಈಗ ಆಕಾಶದ ಮಿತಿಯೂ ಇಲ್ಲ ಎಂದು ಗಾರ್ಸೆಟ್ಟಿ ಹೇಳಿದರು.

ಸೆಪ್ಟೆಂಬರ್ 7ರಿಂದ 10ರವರೆಗೆ ನವದೆಹಲಿಯಲ್ಲಿ ಜಿ20 ನಾಯಕರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಜೋ ಬೈಡೆನ್ ದೆಹಲಿಗೆ ಆಗಮಿಸಲಿದ್ದಾರೆ. ಅದಕ್ಕೂ ಮುನ್ನ ಭಾರತ-ಯುಎಸ್ ನಡುವಿನ ಸಂಬಂಧದ ಕುರಿತು ಯುಎಸ್ ರಾಯಭಾರಿ ಮಾತನಾಡಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles