ಕೋಲ್ಕತ್ತಾ: ದೇಶದ ಹೆಸರು ಭಾರತ್ ಎಂದು ಬದಲಾಗಲಿದೆ ಎಂಬ ವದಂತಿ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಅಧಿಕೃತವಾಗಿ ಘೋಷಿಸದಿದ್ದರೂ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿದ್ದಾರೆ.
‘ಭಾರತ್’ ಎಂಬ ಹೆಸರು ಇಷ್ಟವಾಗದಿದ್ದರೆ ದೇಶ ಬಿಟ್ಟು ತೆರಳಬಹುದು ಎಂದು ಬಿಜೆಪಿ ಸಂಸದ ದಿಲೀಪ್ ಘೋಷ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಡೆದ “ಚಾಯ್ ಪೆ ಚರ್ಚಾ” ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ರೀತಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: G20 Summit : ಹಸಿರು ಪರಿಸರ ನಿಧಿಗೆ 2 ಬಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಿಸಿದ ರಿಷಿ ಸುನಕ್!
‘ಇಂಡಿಯಾವನ್ನು ಭಾರತ್ ಎಂದು ಮರುನಾಮಕರಣ ಮಾಡಲಾಗುವುದು. ಇಷ್ಟವಿಲ್ಲದವರು ದೇಶ ತೊರೆಯಬಹುದು,” ಎಂದಿದ್ದಾರೆ. ಈ ವೇಳೆ ಭಾರತ್ ಎಂಬ ಹೆಸರು ಮರುನಾಮಕರಣ ಸಂಬಂಧ ಟೀಕಿಸಿದ್ದ ಟಿಎಂಸಿ ಹಾಗೂ ಸಿಪಿಐ ಪಕ್ಷದ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. ಟಿಎಂಸಿಯ ನನ್ನ ಸ್ನೇಹಿತರಿಗೆ ಇಂಡಿಯಾವನ್ನು ಭಾರತ್ ಎಂದು ಏಕೆ ಮರುನಾಮಕರಣ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ ಏಕೆಂದರೆ ಅವರಿಗೆ ಅದರ ಇತಿಹಾಸವೂ ಗೊತ್ತಿಲ್ಲ. ಹಾಗೆ ಸಿಪಿಎಂ ಸ್ನೇಹಿತರು ವಿದೇಶಗಳ ಕುರಿತು ಮಾತ್ರ ಚಿಂತಿಸುತ್ತಾರೆ ಅವರಿಗೆ ಈ ಬಗ್ಗೆ ಏನೇನೂ ತಿಳಿದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪತ್ನಿ ಜೊತೆ ರಿಷಿ ಸುನಕ್ ದೇವಾಲಯ ಭೇಟಿ!
ಕೋಲ್ಕತ್ತಾದ ಹಲವು ಬೀದಿಯಲ್ಲಿ ಬ್ರಿಟಿಷ್ ನಾಯಕರ ಮೂರ್ತಿಗಳಿವೆ ಅದನ್ನು ನಾವು ಕಿತ್ತು ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಇಡುತ್ತೇವೆ. ಈ ಮೂರ್ತಿಗಳಿಂದ ನಮಗೇನು ಲಾಭವಿಲ್ಲ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.