ಕೋಲ್ಕತ್ತಾ: ಚಂದ್ರಯಾನ್-3 ಯೋಜನೆ ಮತ್ತೊಂದು ಮೈಲಿಗಲ್ಲು ಬರೆದಿದೆ. ಇಡೀ ವಿಶ್ವ ಭಾರತದತ್ತ ತಿರುಗಿ ನೋಡಿದೆ. ಈ ನಡುವೆ ಚಂದ್ರಯಾನ್ ಯೋಜನೆಯ ಯಶಸ್ವಿಗೆ ಕಾರಣಿಕರ್ತರಾದ ವಿಜ್ಞಾನಿಗಳ ಕುರಿತು ಮೆಚ್ಚುಗೆ ಮಾತನಾಡುವಾಗ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಡವಟ್ಟು ಮಾಡಿಕೊಂಡಿದ್ದಾರೆ.
ಚಂದ್ರಯಾನ್-3 ಚಂದ್ರನ ಮೇಲೆ ಲ್ಯಾಂಡ್ ಆಗುವ ಮುನ್ನ ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾ ಅವರನ್ನು ರಾಕೇಶ್ ರೋಷನ್ ಎಂದು ಉಲ್ಲೇಖಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಭಾರತ: ಇಸ್ರೋ
ರಾಕೇಶ್ ರೋಷನ್ ಖ್ಯಾತ ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಂದೆಯಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರ ಹೆಸರು ಹೇಳಿದ ಬಳಿಕ ರಾಕೇಶ್ ರೋಷನ್ ಹೆಸರು ಟ್ವಿಟರ್ ಸೇರಿ ಗೂಗಲ್‌ನಲ್ಲೂ ಟ್ರೆಂಡ್ ಆಗಿದೆ.
‘ಪಶ್ಚಿಮ ಬಂಗಾಳದ ಜನರ ಪರವಾಗಿ, ನಾನು ಇಸ್ರೋಗೆ ನನ್ನ ಅಭಿನಂದನೆಗಳನ್ನು ಮುಂಚಿತವಾಗಿ ಹೇಳ ಬಯಸುತ್ತೇನೆ. ವಿಜ್ಞಾನಿಗಳು ಇದರ ಕ್ರೆಡಿಟ್ ಪಡೆಯಬೇಕು. ಕ್ರೆಡಿಟ್ ದೇಶಕ್ಕೆ ಸಲ್ಲಬೇಕು. ರಾಕೇಶ್ ರೋಷನ್ ಚಂದ್ರನ ಮೇಲೆ ಇಳಿದಾಗ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕೇಳಿದರು. ಅಲ್ಲಿಂದ ಭಾರತ ಹೇಗೆ ಕಾಣುತ್ತಿದೆ ಎಂದು ಕೇಳಿದ್ದರು ಅಂತ ದೀದಿ ಭಾಷಣದ ವೇಳೆ ಹೇಳಿದ್ದರು.
ಇದನ್ನೂ ಓದಿ: ಮುಂದಿನ ತಿಂಗಳಿನಿಂದ ತರಕಾರಿ ಬೆಲೆಗಳಲ್ಲಿ ಇಳಿಕೆ : ಶಕ್ತಿಕಾಂತ್ ದಾಸ್
ಅವರ ಭಾಷಣ ಉಲ್ಲೇಖಿಸಿ ಹಲವರು ರಾಕೇಶ್ ರೋಷನ್ ಹೆಸರು ಹುಡುಕಾಡಿದ್ದಾರೆ. ಭಾರತೀಯ ಗಗನಯಾತ್ರಿ ಯಾರು ಈ ರಾಕೇಶ್ ರೋಷನ್ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಬ್ಯಾನರ್ಜಿ ರಾಕೇಶ್ ಶರ್ಮಾ ಬದಲು ಬಾಯ್ತಪ್ಪಿನಿಂದ ರಾಕೇಶ್ ರೋಷನ್ ಎಂದಿರುವುದು ತಿಳಿದು ಹಲವು ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.