ನವದೆಹಲಿ: ಭಾರತೀಯ ರೈಲ್ವೆಯು ಇಲಿಗಳನ್ನು ಸೆರೆ ಹಿಡಿಯಲು ಭಾರೀ ಹಣ ಖರ್ಚು ಮಾಡಿರುವ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ಉತ್ತರ ರೈಲ್ವೆಯ ಲಕ್ನೋ ವಿಭಾಗವು 2020-22ರ ಅವಧಿಯಲ್ಲಿ 168 ಇಲಿಗಳನ್ನು ಸೆರೆಹಿಡಿಯಲು ಬರೋಬ್ಬರಿ 69.5 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದೆ. ಈ ಬಗ್ಗೆ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು.


ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಎಎಪಿ ಸಂಸದ ಸಂಜಯ್ ಸಿಂಗ್, ರೈಲ್ವೆಯು 168 ಇಲಿಗಳನ್ನು ಹಿಡಿಯಲು ಬರೋಬ್ಬರಿ 69 ಲಕ್ಷ ಖರ್ಚು ಮಾಡಿದೆ. ಈಗ ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ) ಎಲ್ಲಿವೆ? ಎಂದು ಸಂಜಯ್ ಸಿಂಗ್ ಪ್ರಶ್ನಿಸಿದ್ದಾರೆ.


ಈ ವಿಚಾರ ಎಲ್ಲೆಡೆ ಸೌಂಡ್ ಮಾಡುತ್ತಿದ್ದು, ಇಲಿ ಹಿಡಿಯಲು ಇಷ್ಟೆಲ್ಲಾ ಖರ್ಚು ಮಾಡ್ತಾರಾ? ಎಂದು ನೆಟ್ಟಿಗರು ಕಂಗಾಲಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.