Friday, September 29, 2023
spot_img
- Advertisement -spot_img

ಮೊದಲ ತಿಂಗಳಲ್ಲಿ ಭಾರತದ GDP ಶೇ.7.8 ರಷ್ಟು ಬೆಳವಣಿಗೆ!

ನವದೆಹಲಿ : ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಇಂದು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2023-24 ರ ಆರ್ಥಿಕ ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಶೇ.7.8 ರಷ್ಟು ಅಂದರೆ ಸ್ವಲ್ಪ ಬೆಳೆವಣಿಗೆ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿನ (2022ರ ಏಪ್ರಿಲ್​ನಿಂದ ಜೂನ್​ವರೆಗೆ) ಜಿಡಿಪಿ ಬೆಳವಣಿಗೆಗೆ ಹೋಲಿಸಿದರೆ ಆಗಿರುವ ಹೆಚ್ಚಳ. ಇನ್ನು ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2023ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 6.1ರಷ್ಟು ಹೆಚ್ಚಳವಾಗಿತ್ತು.

ಇನ್ನು ಹಿಂದಿನ ಕ್ವಾರ್ಟರ್​ನಲ್ಲಿ, ಅಂದರೆ 2023ರ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 6.1ರಷ್ಟು ಹೆಚ್ಚಳವಾಗಿತ್ತು.

ಇದನ್ನೂ ಓದಿ : ಭಾರತದ ಪ್ರತಿಷ್ಠೆ ಅಪಾಯದಲ್ಲಿದೆ : I.N.D.I.A ಸಭೆಯಲ್ಲಿ ರಾಹುಲ್

ರಾಷ್ಟ್ರೀಯ ಅಂಕಿಅಂಶ ಕಚೇರಿ ದತ್ತಾಂಶದ ಪ್ರಕಾರ, ಕೃಷಿ ವಲಯವು ಶೇ.3.5 ಬೆಳವಣಿಗೆಯನ್ನು ಕಂಡಿದೆ, ಇದು 2022-23 ರ ಆರ್ಥಿಕ ವರ್ಷದ ಅದೇ ಅವಧಿಯಲ್ಲಿ ದಾಖಲಾದ ಶೇ.2.4 ರಿಂದ ಸುಧಾರಣೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯದ ಬೆಳವಣಿಗೆಯ ವೇಗವು ಶೇ. 4.7 ಕ್ಕೆ ಇಳಿದಿದೆ, ಇದು ಹಿಂದಿನ ವರ್ಷದ ಅನುಗುಣವಾದ ಅವಧಿಗೆ ಹೋಲಿಕೆ ಮಾಡಿದರೆ ಶೇ. 6.1 ಕ್ಕಿಂತ ಕಡಿಮೆಯಾಗಿದೆ.

ಆಗಸ್ಟ್‌ನಲ್ಲಿ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಂತರ, ಮೊದಲ ಕ್ವಾರ್ಟರ್​ನಲ್ಲಿ ಶೇ. 8ರಷ್ಟು ಜಿಡಿಪಿ ಹೆಚ್ಚಬಹುದು ಎಂದು ನಿರೀಕ್ಷಿಸಿತ್ತು. ಇತ್ತೀಚೆಗೆ ರಾಯ್ಟರ್ಸ್ ನಡೆಸಿದ ಸಮೀಕ್ಷೆ ಅಥವಾ ಪೋಲ್​ನಲ್ಲಿ ವಿವಿಧ ಕಾರ್ಪೊರೇಟ್ ಆರ್ಥಿಕ ತಜ್ಞರು ಅಂದಾಜಿಸಿದ ಪ್ರಕಾರ ಸರಾಸರಿಯಾಗಿ ಜಿಡಿಪಿ ಶೇ. 8ಕ್ಕಿಂತ ತುಸು ಹೆಚ್ಚು ಬೆಳೆಯಬಹುದು ಎಂಬ ಅಂದಾಜಿತ್ತು. ವಾಸ್ತವವಾಗಿ ಆಗಿರುವ ಜಿಡಿಪಿ ಬೆಳವಣಿಗೆ ಸರಿಸುಮಾರು ಆ ಅಂದಾಜಿಗೆ ಸಮೀಪ ಇದೆ.

ಇದನ್ನೂ ಓದಿ : I.N.D.I.A ಒಕ್ಕೂಟದ ಮುಂಬೈ ಸಭೆಯ ಅಜೆಂಡಾ ಏನು ಗೊತ್ತಾ?

ಅಂತರಾಷ್ಟ್ರೀಯ ಹಣಕಾಸು ನಿಧಿ (IMF) 2023 ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಗೆ ತನ್ನ ದೃಷ್ಟಿಕೋನವನ್ನು ಸರಿಹೊಂದಿಸಿದೆ, ಅದನ್ನು ಶೇ.6.1 ರಷ್ಟು ಹೆಚ್ಚಾಗಿದೆ.

2023-24ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಒಟ್ಟಾರೆ ರಿಯಲ್ ಜಿಡಿಪಿ 40.37 ಲಕ್ಷಕೋಟಿ ರೂ ಮಟ್ಟದಲ್ಲಿರಬಹುದು ಎಂದು ಅಂದಾಜಿಸಲಾಗಿದೆ. 2022-23ರ ಹಣಕಾಸು ವರ್ಷದ ಇದೇ ಕ್ವಾರ್ಟರ್​ನಲ್ಲಿ ಜಿಡಿಪಿ 37.44 ಲಕ್ಷಕೋಟಿ ರೂ ಇತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಶೇ. 7.8ರಷ್ಟು ಜಿಡಿಪಿ ಬೆಳೆದಿದೆ. ಆದರೆ, 2021-22ರ ಮೊದಲ ಕ್ವಾರ್ಟರ್​ಗೆ ಹೋಲಿಸಿದರೆ ಕಳೆದ ವರ್ಷದ ಕ್ವಾರ್ಟರ್​ನಲ್ಲಿ ಜಿಡಿಪಿ ಬರೋಬ್ಬರಿ ಶೇ. 13.1ರಷ್ಟು ಹೈಜಂಪ್ ಆಗಿತ್ತು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles