Tuesday, November 28, 2023
spot_img
- Advertisement -spot_img

ಸಿಎಂ ಬೊಮ್ಮಾಯಿಯವರಿಂದ ಚಲನಚಿತ್ರೋತ್ಸವ ಉದ್ಘಾಟನೆ 23ರಂದು

ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಮಾರ್ಚ್ 23ರಂದು ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ 14ನೇ ಬೆಂಗಳೂರು ಅಂತಾರಾಷ್ಟ್ರಿಯ ಚಲನಚಿತ್ರೋತ್ಸವ ನಡೆಯಲಿದ್ದು, ಎಲ್ಲ ಸಕಲ ಸಿದ್ದತೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಚಲನಚಿತ್ರೋತ್ಸವವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದು, ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಭಾಗವಹಿಸಲಿರುವರು ಎಂದರು.

ಇನ್ನೂ ಮುಖ್ಯ ಅತಿಥಿಯಾಗಿ ಬಾಲಿವುಡ್‌ ಎವರ್ ಗ್ರೀನ್ ನಟಿ ರೇಖಾ ಮುಖ್ಯ ಅತಿಥಿಯಾಗಿ ಬರಲಿದ್ದಾರೆ, 23 ರಿಂದ 30 ರವರೆಗೆ ಒಂದು ವಾರಗಳ ಕಾಲ ಈ ಚಲನಚಿತ್ರೋತ್ಸವ ನಡೆಯಲಿದೆ, ಒಂದು ವಾರಗಳ ಕಾಲ ನಡೆಯುವ ಈ ಚಿತ್ರೋತ್ಸವಕ್ಕೆ ರಾಜ್ಯ ಸರ್ಕಾರ 4 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು

Related Articles

- Advertisement -spot_img

Latest Articles