Friday, September 29, 2023
spot_img
- Advertisement -spot_img

ಬಾಗೇಪಲ್ಲಿ ‘ಹ್ಯಾಟ್ರಿಕ್ ಶಾಸಕ’ ಎಸ್.ಎನ್. ಸುಬ್ಬಾರೆಡ್ಡಿ ಪರಿಚಯ

ಒಂದು ಬಾರಿ ಸ್ವಂತಂತ್ರ ಅಭ್ಯರ್ಥಿ ಹಾಗೂ ಎರಡು ಭಾರಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿರುವ ಎಸ್.ಎನ್. ಸುಬ್ಬಾರೆಡ್ಡಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಹ್ಯಾಟ್ರಿಕ್ ಎಂಎಲ್ಎ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಹೆಸರು ಮಾಡಿದ್ದ ಅವರು, ಇದೀಗ ರಾಜಕೀಯ ರಂಗದಲ್ಲೂ ಯಶಸ್ವಿಯಾಗಿದ್ದಾರೆ.

ನಂಜುಂಡ ರೆಡ್ಡಿ ಹಾಗೂ ಅದಿಲಕ್ಷ್ಮಮ್ಮ ಅವರ ಪುತ್ರನಾಗಿ 07 ಮೇ 1966ರಂದು ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ಜನಿಸಿದ ಅವರು, ಬಾಗೇಪಲ್ಲಿಯಲ್ಲೇ 10ನೇ ತರಗತಿವರೆಗೆ ಓದಿ, ಬೆಂಗಳೂರಿನಲ್ಲಿ ಟಿಸಿಎಚ್ ತರಬೇತಿ ಪಡೆದಿದ್ದಾರೆ. ಅವರ ಪತ್ನಿ ಹೆಸರು ಶೀಲಾ.

ಬಾಲ್ಯ ಹಾಗೂ ವೃತ್ತಿ ಜೀವನ:

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿಯ ಚಿನ್ನಕಾಯಲಪಲ್ಲಿ ಗ್ರಾಮದಲ್ಲಿ ಜನಿಸಿದ ಸುಬ್ಬಾರೆಡ್ಡಿ, ಸ್ವಗ್ರಾಮದಲ್ಲೆ ಪ್ರಾಥಮಿಕ ಶಿಕ್ಷಣ ಮುಗಿಸಿ 1983ರಲ್ಲಿ ಬಾಗೇಪಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ತೇರ್ಗಡೆಯಾದರು. ನಂತರ 1986ರಲ್ಲಿ ಬೆಂಗಳೂರಿನ ಮಾರತಹಳ್ಳಿಯ ವೆಂಕಟೇಶ್ ಟಿಸಿಎಚ್ ತರಬೇತಿ ಕಾಲೇಜಿನಲ್ಲಿ ಪದವಿ ಮುಗಿಸಿದ್ರು. ಓದಿನ ನಂತರ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆದರು.

ಉದ್ಯಮದಲ್ಲಿ ಯಶಸ್ವಿಯಾದ ನಂತರ ಬಾಗೇಪಲ್ಲಿ ರಾಜಕೀಯದಲ್ಲಿ ಕಾಣಿಸಿಕೊಂಡು ಮೊದಲ ಬಾರಿಗೆ ಎಸ್ ಎನ್ ಸುಬ್ಬಾರೆಡ್ಡಿ ಅವರು ಸ್ವಂತತ್ರ ಅಭ್ಯರ್ಥಿಯಾಗಿ ನಿಂತು ಸಿಪಿಐಎಮ್ ಪಕ್ಷಕ್ಕೆ ಪ್ರಬಲ ಪೈಪೋಟಿ ಒಡ್ಡಿ, 2013 ರಲ್ಲಿ ಮೊದಲ ಬಾರಿಗೆ ಜಯ ಸಾಧಿಸಿ ವಿಧಾನಸೌಧ ಮೆಟ್ಟಿಲೇರಿದರು.

ನಂತರ 2018ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು, ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಜಯ ಸಾಧಿಸಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬಾಗೇಪಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಸತತ ಮೂರನೇ ಬಾರಿಗೆ ಮತ್ತೊಂದು ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎನಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles