ಹೆಸರು : ಹುಲ್ಲಪ್ಪ ಯಮನಪ್ಪ ಮೇಟಿ
ಸ್ಥಾನ : ವಿಧಾನಸಭಾ ಸದಸ್ಯ (ಕಾಂಗ್ರೆಸ್)
ತಂದೆ : ಯಮನಪ್ಪ ಮೇಟಿ
ತಾಯಿ : ಹೊಳೆಯವ್ವ ಯಮನಪ್ಪ ಮೇಟಿ
ಜನ್ಮ ದಿನಾಂಕ : 9-10-1946
ಪತ್ನಿ : ಲಕ್ಷ್ಮಿಬಾಯಿ ಎಚ್. ಮೇಟಿ
ಜನ್ಮ ಸ್ಥಳ : ತಿಮ್ಮಾಪುರ
ಶಿಕ್ಷಣ : 8ನೇ ತರಗತಿ ಉತ್ತೀರ್ಣ
ಜಾತಿ : ಹಿಂದು ಕುರುಬರ
ಪಕ್ಷ : ಕಾಂಗ್ರೆಸ್
ಕ್ಷೇತ್ರ : ಬಾಗಲಕೋಟೆ
ಬಾಲ್ಯ ಹಾಗೂ ಜೀವನ :
ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಯಮನಪ್ಪ-ಹೊಳೆಯವ್ವ ದಂಪತಿಯ ಪುತ್ರನಾಗಿ ಜನಸಿದ ಎಚ್.ವೈ. ಮೇಟಿ ಅವರು, ಕೃಷಿಯನ್ನೇ ನಂಬಿ ತಂದೆ- ತಾಯಿಯೊಂದಿಗೆ ಕೃಷಿ ಮಾಡತೊಡಗಿದರು. ಜೊತೆಗೆ ಕುರಿಗಾರಿಕೆ, ಉಣ್ಣೆ ನೇಕಾರಿಕೆಯೂ ಮಾಡತೊಡಗಿದರು. ಕೃಷಿಯೊಂದಿಗೆ 21ನೇ ವಯಸ್ಸಿನಲ್ಲೇ ರಾಜಕೀಯ ಕ್ಷೇತ್ರ ಪ್ರವೇಶಿಸಿ, ರಾಜಕೀಯ ಕೃಷಿಯೂ ಆರಂಭಿಸಿದರು. ಎಚ್.ವೈ. ಮೇಟಿ ಅವರು ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೂ ಆಡಳಿತ ನಡೆಸಿದ ಖ್ಯಾತಿ ಅವರಿಗಿದೆ.
ಹವ್ಯಾಸಗಳು :
ಕೃಷಿ ಚಟುವಟಿಕೆ ಮನೆತನದಲ್ಲಿ ಜನಸಿದ ಹುಲ್ಲಪ್ಪ ಯಮನಪ್ಪ ಮೇಟಿ ಅವರು 8ನೇ ತರಗತಿಗೆ ಶಿಕ್ಷಣ ಮುಗಿಸಿ ತಂದೆ-ತಾಯಿಯAತೆಯೇ ತಾನೂ ಕೂಡ ಕೃಷಿ ಚಟುವಟಿಕೆ ಮಾಡತೊಡಗಿದರು. ಇಂದಿಗೂ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ.
ರಾಜಕೀಯ ಜೀವನ :
• ತಮ್ಮ 21ನೇ ವಯಸ್ಸಿನಲ್ಲಿ ಬಾಗಲಕೋಟೆ ತಾಲೂಕಿನ ಬಿಲ್ಕೆರೂರಿನ ಗುಂಪು ಗ್ರಾ.ಪಂ.ಗೆ ಸದಸ್ಯರಾಗಿ ಆಯ್ಕೆ.
• 1978ರ ವರೆಗೆ ಅದೇ ಬಿಲ್ಕೆರೂರಿನ ಗುಂಪು ಗ್ರಾ.ಪಂ. ಅಧ್ಯಕ್ಷರಾಗಿಯೂ ಕೆಲಸ ನಿರ್ವಹಣೆ
• 1974ರಲ್ಲಿ ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶರಾಗಿ ಚುನಾಯಿತರಾದರು.
• ನಂತರ ಟಿಎಪಿಸಿಎಂಎಸ್ ಸದಸ್ಯರೂ ಆಗಿದ್ದರು.
• 1975ರಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
• 1989ರಲ್ಲಿ ಬಾದಾಮಿ ತಾಲೂಕಿನ ಗುಳೇದಗುಡ್ಡ ಮತಕ್ಷೇತ್ರದಿಂದ ಜನತಾ ಪಕ್ಷದಿಂದ ಆಯ್ಕೆಯಾದರು.
• 1994 ರಲ್ಲಿ ಮತ್ತೆ ಅದೇ ಗುಳೇದಗುಡ್ಡ ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿ, ಆಗಲೂ
ಗುಂಪು ಗ್ರಾ.ಪಂ.ಗೆ ಸದಸ್ಯರಾಗಿ ಆಯ್ಕೆ.
• 1978ರ ವರೆಗೆ ಅದೇ ಬಿಲ್ಕೆರೂರಿನ ಗುಂಪು ಗ್ರಾ.ಪಂ. ಅಧ್ಯಕ್ಷರಾಗಿಯೂ ಕೆಲಸ ನಿರ್ವಹಣೆ
• 1974ರಲ್ಲಿ ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶರಾಗಿ ಚುನಾಯಿತರಾದರು.
• ನಂತರ ಟಿಎಪಿಸಿಎಂಎಸ್ ಸದಸ್ಯರೂ ಆಗಿದ್ದರು.
• 1985ರಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ
• 1989ರಲ್ಲಿ. ಬಾದಾಮಿ ತಾಲೂಕಿನ ಗುಳೇದಗುಡ್ಡ ಮತಕ್ಷೇತ್ರದಿಂದ ಜನತಾ ಪಕ್ಷದಿಂದ ಆಯ್ಕೆಯಾದರು.
• 1994 ರಲ್ಲಿ ಮತ್ತೆ ಅದೇ ಗುಳೇದಗುಡ್ಡ ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿ, ಆಗಲೂ ಆಯ್ಕೆಯಾದರು.
• ಒಂದೂವರೆ ವರ್ಷಗಳ ಕಾಲ ಅರಣ್ಯ ಸಚಿವರಾಗಿ ಕೆಲಸ ಮಾಡಿದರು.
• 1996ರಲ್ಲಿ ಒಂದೂವರೆ ವರ್ಷಗಳ ಕಾಲ ಲೋಕಸಭೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
• 1998ರಲ್ಲಿ ಎಂಎಸ್‌ಐಎಲ್ ನಿಗಮದ ಚೇರಮನ್ ಹುದ್ದೆಯನ್ನು ದೇವೇಗೌಡರು ನೀಡಿದ್ದರು.
• 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್‌ನಿಂದ ಮೇಟಿ ಆಯ್ಕೆ.
• 2013ರಲ್ಲಿ ಬಾಗಲಕೋಟೆ ಶಾಸಕರಾಗಿ ಕಾರ್ಯನಿರ್ವಹಣೆ.
• ಪ್ರಸ್ತುತವಾಗಿ ಬಾಗಲಕೋಟೆ ಮತಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.