ಬೆಂಗಳೂರು: ಅಧಿಕಾರಿ ರೋಹಿಣಿ ಸಿಂಧೂರಿ ಮಹಿಳಾ ಅಧಿಕಾರಿ ಡಿ ರೂಪಾ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ದಾಖಲಿಸಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ವಕೀಲರು ಮೆಯೋಹಾಲ್ ಕೋರ್ಟ್‌ಗೆ ಹಾಜರಾಗಿ ಇಂದು ರೂಪಾ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಈ ಅರ್ಜಿಯು ನಾಳೆ ಕೋರ್ಟ್‌ನಲ್ಲಿ ವಿಚಾರಣೆ ಆಗಲಿದೆ. ನ್ಯಾಯಾಲಯದ ಆದೇಶವನ್ನು ಖುದ್ದು ವಕೀಲರೇ ಡಿ.ರೂಪ ಅವರಿಗೆ ತಲುಪಿಸಿದ್ದಾರೆ. ರೂಪಾ ಕಾನೂನಿನ ಮೇಲೆ ಗೌರವ ಇಲ್ಲದ ಹಾಗೇ ನಡೆದುಕೊಳ್ಳುತ್ತಾ ಇದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಾ ಇದ್ದಾರೆ. ಹಾಗಾಗಿ ಕಾನೂನು ಕ್ರಮಕೈಗೊಳ್ಳುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಹ್ಯಾಂಡ್ ಸಮನ್ಸ್ ಅನ್ನು ನೀಡಿದರೂ ತಮ್ಮ ಫೇಸ್ ಬುಕ್ ಫೇಜ್ ಅಲ್ಲಿ ಲಿಂಕ್ ಶೇರ್ ಮಾಡುತ್ತಾ ಇದ್ದಾರೆ ಎಂದು ದೂರು ದಾಖಲಿಸಲಾಗಿದೆ. ಅಂದಹಾಗೆ ರೋಹಿಣಿ ಸಿಂಧೂರಿ ಕೋರ್ಟ್ ಮೆಟ್ಟಿಲೇರಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಹರಡದಂತೆ ಡಿ.ರೂಪಾ ಮತ್ತು ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದರು.
ಜೊತೆಗೆ, ಎಲ್ಲ ಪೋಸ್ಟ್‌ಗಳನ್ನು ಡಿಲಿಟ್ ಮಾಡಿ ಕ್ಷಮೆ ಕೇಳಿ, ಇಲ್ಲವಾದಲ್ಲಿ 1 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದರು.ಆದರೆ, ಇದಕ್ಕೆ ರೂಪಾ ಕ್ಯಾರೇ ಎನ್ನದ ಕಾರಣ 1 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.