ಬೆಂಗಳೂರು: ನಾನು ಯಾವತ್ತೂ ಭ್ರಷ್ಟಾಚಾರ ಪರವಾಗಿ ಕೆಲಸ ಮಾಡಿಲ್ಲ. ನಾನು ಯಾವತ್ತಿಗೂ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಒಬ್ಬ ಐಎಎಸ್ ಅಧಿಕಾರಿ ಕರ್ನಾಟಕದಲ್ಲಿ ಮೃತಪಟ್ಟಿದ್ದರು, ಐಪಿಎಸ್ ಅಧಿಕಾರಿಯೊಬ್ಬರು ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ಐಎಎಸ್ ದಂಪತಿ ಬೇರೆ ಆಗಿದ್ದಾರೆ ಎಂದು ತಿಳಿಸಿದರು.
ಆರ್ ಟಿಐ ಕಾರ್ಯಕರ್ತ ಗಂಗರಾಜು ಜೊತೆಗಿನ ಆಡಿಯೋ ಸಂಭಾಷಣೆ ವಿಚಾರವಾಗಿ ಸ್ಪಷ್ಟನೆ ನೀಡಿ, ಗಂಗರಾಜುಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ನಿಲ್ಲಿಸಲು ನಾನು ಹೇಳಿಲ್ಲ. ನಿಲ್ಲಿಸಿ ಅಂತಾ ಹೇಳಿದ್ರೆ ಅದನ್ನು ಪ್ರೂವ್ ಮಾಡಲಿ.
ಅನಾವಶ್ಯಕವಾಗಿ ಆಡಿಯೋ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.ನಮ್ಮವರನ್ನ ಬಳಸಿಕೊಂಡು ಲ್ಯಾಂಡ್ ಡೀಲ್ ಮಾಡುತ್ತಿದ್ದಾಳೆ. ಅವಳಿಂದ ಎಷ್ಟೋ ಮನೆ ಹಾಳಾಗಿದೆ. ಗಂಡನ ರಿಯಲ್ ಎಸ್ಟೇಟ್ ಪ್ರಮೋಟ್ ಮಾಡಲು ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ರೋಹಿಣಿ ಪಡೆದಿದ್ದಾಳೆ. ಇದನ್ನು ಬೇಕಾದ್ರೆ ರೆಕಾರ್ಡ್ ಮಾಡ್ಕೊಳ್ಳಿ. ನೀವು ಅಕ್ರಮವಾಗಿ ಕೆಲಸ ಮಾಡಿಸಿಕೊಳ್ಳಲು ಬಂದಿದ್ದೀಯಾ ಇಲ್ಲಿಂದ ಎದ್ದು ಹೋಗು ಎಂದು ವ್ಯಕ್ತಿಗೆ ಬೈದು ರೂಪಾ ಕಳುಹಿಸಿದ್ದಾರೆ ಎಂಬ ಮಾತಿನ ಆಡಿಯೋ ವೈರಲ್ ಆಗಿದೆ.