ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ನಿಷೇಧವಿದ್ದರೂ ಬೆಂಗಳೂರಿನಾದ್ಯಂತ 5000ಕ್ಕೂ ಹೆಚ್ಚು ಬಿಜೆಪಿ ಪಕ್ಷದ ಅನಧಿಕೃತ ಬ್ಯಾನರ್‌ಗಳನ್ನು ಹಾಕಲಾಗಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬೆಂಗಳೂರು ನಗರದಲ್ಲಿ ಅಳವಡಿಸಲಾಗಿರುವ ಬಿಜೆಪಿ ನಾಯಕರ ಫ್ಲೆಕ್ಸ್‌ಗಳ ವಿಚಾರವಾಗಿ ಕಾಂಗ್ರೆಸ್ ಹರಿಹಾಯ್ದಿದೆ. ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ನಗರ ಪೊಲೀಸರೇ, ಇವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲವೇಕೆ? ಬ್ಯಾನರ್‌ಗಳನ್ನು ತೆರವು ಮಾಡಲಿಲ್ಲ ಏಕೆ? ಕಾನೂನು ಬಿಜೆಪಿಗೇ ಬೇರೆ, ಇತರರಿಗೆ ಬೇರೆ ಇದೆಯೇ? ಕಾನೂನು ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳಲು ಮಾತ್ರ ಇರುವುದೇ ಬಸವರಾಜ ಬೊಮ್ಮಾಯಿ ಅವರೇ’ ಎಂದು ಪ್ರಶ್ನಿಸಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಬಿಜೆಪಿ ನಾಯಕರು ಅಳವಡಿಸಿರುವ ಫ್ಲೆಕ್ಸ್‌ಗಳು ನಗರದಾದ್ಯಂತ ಗೋಚರಿಸುತ್ತಿವೆ. ಇದು ನಗರದ ಸೌಂದರ್ಯಕ್ಕೆ ಹಾನಿ ಉಂಟು ಮಾಡುತ್ತಿರುವುದು ಬಗ್ಗೆ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ತೆರವು ಕಾರ್ಯಾಚರಣೆಯನ್ನು ಪ್ರತಿ ದಿನವೂ ಮಾಡಬೇಕು. ಈ ಕುರಿತು ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ಹೇಳಲಾಗಿದೆ ಎಂದು ಬಿಬಿಎಂಪಿ ತಿಳಿಸಿತ್ತು. ಆದರೆ, ದೀಪಾವಳಿ ಹಬ್ಬದ ಪ್ರಯುಕ್ತ ಬಿಜೆಪಿ ನಾಯಕರು ಅಳವಡಿಸಿರುವ ಫ್ಲೆಕ್ಸ್‌ಗಳು ನಗರದಾದ್ಯಂತ ಗೋಚರಿಸುತ್ತಿವೆ.