Wednesday, November 29, 2023
spot_img
- Advertisement -spot_img

ಇಸ್ರೇಲ್ ಪ್ರಧಾನಿಯನ್ನು ಗುಂಡಿಕ್ಕಿ ಕೊಲ್ಲಬೇಕು: ಸಂಸದ ರಾಜಮೋಹನ್

ಕೇರಳ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಬ್ಬ ಯುದ್ಧಾಪರಾಧಿಯಾಗಿದ್ದು, ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿಥಾನ್ ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧ ಹಿನ್ನೆಲೆ ಕಾಸರಗೋಡಿನಲ್ಲಿ ನಡೆದ ಪ್ಯಾಲೆಸ್ತೀನ್ ಪರ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2ನೇ ಮಹಾಯುದ್ಧದ ನಂತರ ಯುದ್ಧ ಅಪರಾಧಗಳಲ್ಲಿ ತೊಡಗಿರುವವರಿಗೆ ನ್ಯೂರೆಂಬರ್ಗ್ ಪ್ರಯೋಗಗಳನ್ನು ಬಳಸಲಾಗಿತ್ತು. ಈ ಪ್ರಯೋಗಗಳಲ್ಲಿ ಯುದ್ಧ ಅಪರಾಧಿಗಳನ್ನು ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲಲಾಗಿತ್ತು. ನ್ಯೂರೆಂಬರ್ಗ್ ಮಾದರಿಯ ಪ್ರಯೋಗ ಕೈಗೊಳ್ಳಲು ಇದು ಉತ್ತಮ ಸಮಯ ಎಂದಿದ್ದಾರೆ.

ಇದನ್ನೂ ಓದಿ: ಮತಬೇಟೆ ವೇಳೆ ಕುಸಿದು ಬಿದ್ದ ನಾಯಕಿ ಕೆ.ಕವಿತಾ!

ಬೆಂಜಮಿನ್ ನೆತನ್ಯಾಹು ವಿಶ್ವದ ಮುಂದೆ ಯುದ್ಧ ಅಪರಾಧಿಯಾಗಿ ನಿಂತಿದ್ದಾರೆ. ವಿಚಾರಣೆಯಿಲ್ಲದೆ ನೆತನ್ಯಾಹುವನ್ನು ಗುಂಡಿಕ್ಕಿ ಕೊಲ್ಲುವ ಸಮಯ ಬಂದಿದೆ, ಏಕೆಂದರೆ ಅವರು ಆ ಮಟ್ಟಿಗೆ ಕ್ರೌರ್ಯ ತೋರಿಸುತ್ತಿದ್ದಾರೆ. ಗಾಜಾದಲ್ಲಿ ಮಕ್ಕಳನ್ನು ಕರುಣೆಯಿಲ್ಲದೆ ಗುಂಡಿಕ್ಕಿ ಕೊಲ್ಲಲಾಗಿಎ. ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಜಿನೀವಾ ಒಪ್ಪಂದದ ಎಲ್ಲಾ ಒಪ್ಪಂದಗಳನ್ನು ಮುರಿಯುವವರಿಗೆ ಶಿಕ್ಷೆಯಾಗಬೇಕು ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles