ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಿ ವಿಜ್ಞಾನಿಗಳ ಪ್ರಶಂಸಿದ್ದರು. ಈ ವೇಳೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು, ಚಂದ್ರಯಾನ-2 ಕ್ರ್ಯಾಶ್-ಲ್ಯಾಂಡ್ ಆಗಿದ್ದ ಸ್ಥಳವನ್ನು’ತಿರಂಗಾ ಪಾಯಿಂಟ್’ ಎಂದು ಕರೆಯುವುದಾಗಿ ಮೋದಿ ಘೋಷಿಸಿದ್ದರು. ಈ ಘೋಷಣೆಯ ಬಳಿಕ ವಿಪಕ್ಷಗಳು ಕಿಡಿಕಾರಿವೆ. ಚಂದ್ರಯಾನ್ ಯೋಜನೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿವೆ.
ಈ ಸಂಬಂಧ ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮಹುವಾ ಮೊಯಿತ್ರಾ ‘ಇಸ್ರೋ ಈಗ ಬಿಜೆಪಿಯ 2024ರ ಚುಣಾವಣಾ ಪ್ರಚಾರ ಅಸ್ತ್ರವಾಗಿದೆ. ಚುನಾವಣೆಯ ಮೊದಲು ರಾಷ್ಟ್ರೀಯತೆಯನ್ನು ಪ್ರಚೋದಿಸಲು ಪ್ರತಿಯೊಂದು ಕಾರ್ಯಾಚರಣೆಯನ್ನು ಬಳಸಿಕೊಳ್ಳಲಾಗುತ್ತದೆ. ಭಕ್ತ ಮತ್ತು ಟ್ರೋಲ್ ಸೇನೆಯು 24-7 ದಶಕಗಳ ಭಾರತೀಯ ವೈಜ್ಞಾನಿಕ ಸಂಶೋಧನೆಯನ್ನು ಮೋದಿ ಹೈ ತೋ ಮುಮ್ಕಿನ ಹೈ (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಪ್ಯಾಕೇಜ್ ಮಾಡಲು ಕೆಲಸ ಮಾಡುತ್ತಿವೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಚಂದ್ರಯಾನ್ ಯೋಜನೆಯ 2 ಉದ್ದೇಶ ಈಡೇರಿದೆ, 3ನೇ ಉದ್ದೇಶ ಪ್ರಗತಿಯಲ್ಲಿ; ಇಸ್ರೋ
ಇವರ ಜೊತೆ ಟಿಎಂಸಿ ಸಚಿವ ಅರೂಪ್ ಬಿಸ್ವಾಸ್ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ, ಯಶಸ್ವಿ ಚಂದ್ರಯಾನ್ ಯೋಜನೆಯ ಮೂಲಕ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಕಳೆದ 17 ತಿಂಗಳುಗಳಿಂದ ನಿಯಮಿತವಾಗಿ ಸಂಬಳ ಸಿಗುತ್ತಿಲ್ಲ ಎಂದಿದ್ದಾರೆ. ಈ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದ್ದು, ಇದು ಅಗ್ಗದ ರಾಜಕೀಯ ಸ್ಟಂಟ್ ಎಂದು ಕರೆದಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.