ಬೆಂಗಳೂರು : ಚಂದ್ರಯಾನ-3ರ ಯಶಸ್ಸಿನ ಬಳಿಕ ಇಸ್ರೋದ ಬಹು ನಿರೀಕ್ಷಿತ ಸೂರ್ಯಯಾನ ಯೋಜನೆಯ ಬಾಹ್ಯಾಕಾಶ ನೌಕೆ ಆದಿತ್ಯ ಎಲ್-1 ಇಂದು ಉಡಾವಣೆಯಾಗಿದೆ. ಅಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ ಎಲ್-1 ನೌಕೆ ನಭಕ್ಕೆ ಚಿಮ್ಮಿದೆ.
ಮಿಷನ್ ಆದಿತ್ಯ ಎಲ್-1 ನೌಕೆ ನಾಲ್ಕು ತಿಂಗಳ ಬಳಿಕ, ಅಂದರೆ ಮುಂದಿನ ಜನವರಿ ಮೊದಲ ವಾರದಲ್ಲಿ ನಿಗದಿತ ಹಾಲೋ ಆರ್ಬಿಟ್‌ಗೆ (ಹಾಲೋ ಕಕ್ಷೆ) ಸೇರಲಿದೆ. ಸೂರ್ಯನ ಅಧ್ಯಯನದ ಉದ್ದೇಶದಿಂದ ಆದಿತ್ಯ ಎಲ್-1 ಮಿಷನ್ ಉಡಾವಣೆ ಮಾಡಲಾಗಿದೆ. ಇದು ಬರೋಬ್ಬರಿ 15 ಲಕ್ಷ ಕಿ.ಮೀ ದೂರ ಹಾರಾಟ ನಡೆಸುವ ಮೂಲಕ ಭೂಮಿಯ ಗುರುತ್ವಾಕರ್ಷಣ ರೇಖೆಯನ್ನು ದಾಟಿ ನಿಗದಿತ ಕಕ್ಷೆಯನ್ನು ಸೇರಲಿದೆ.
ಆದಿತ್ಯ ಎಲ್-1 ನೌಕೆ ಒಟ್ಟು 7 ವೈಜ್ಞಾನಿಕ ಉಪಕರಣಗಳನ್ನ ಹೊತ್ತು ಬಾಹ್ಯಾಕಾಶಕ್ಕೆ ಹಾರಿದೆ. ಇದರಲ್ಲಿ ಮೂರು ಉಪಕರಣಗಳು ನಿಗದಿತ ಕಕ್ಷೆಯಿಂದ ಸೂರ್ಯನತ್ತ ನೋಡುತ್ತಾ ವಿವಿಧ ಭಾಗಗಳ ಅಧ್ಯಯನ ಮಾಡಲಿದೆ. ಉಳಿದ ಮೂರು ಉಪಕರಣಗಳು, ಸೂರ್ಯನಿಂದ ಬರುವ ವಿಕಿರಣ ಮತ್ತು ವಸ್ತುಗಳನ್ನು ಅಳತೆ ಮಾಡುವ ಕೆಲಸ ಮಾಡಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.