ಬೆಂಗಳೂರು : ನಾನು ವಿದೇಶ ಪ್ರವಾಸದಲ್ಲಿದ್ದಾಗ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಸಂತಸಪಟ್ಟಿದ್ದೆ, ಅಲ್ಲದೆ ವಿಜ್ಞಾನಿಗಳ ಭೇಟಿಗಾಗಿ ಉತ್ಸುಕನಾಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಗರದ ಹೆಚ್‌ಎಲ್ ವಿಮಾನ ನಿಲ್ದಾಣದ ಬಳಿ ಮಾತನಾಡಿದ ಅವರು, ಇಲ್ಲಿನ ಸರ್ಕಾರದ ಮುಖ್ಯಮಂತ್ರಿಗಳಿಗೆ ನನ್ನ ಸ್ವಾಗತಕ್ಕೆ ಬರಬೇಡಿ ಎಂದು ಮನವಿ ಮಾಡಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಇಸ್ರೋ ಸಾಧನೆಯ ಕ್ರೆಡಿಟ್ ಮೋದಿಗೆ ಸಲ್ಲುತ್ತದೆ..
ಯಾವುದೇ ಒಬ್ಬ ರಾಜಕೀಯ ವ್ಯಕ್ತಿಗೆ ಬೆಳಿಗ್ಗೆ ಇಷ್ಟೊತ್ತಿಗೆ ಬಂದು ಆಹ್ವಾನ ನೀಡಿದ್ದು ನಾನು ಎಂದು ನೋಡಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹೇಳಿದ್ದಾರೆ.
ಇಂದು ಕಾರ್ಯಕರ್ತರು,ಅಭಿಮಾನಿಗಳು, ಮೋದಿ ಮತ್ತು ಇಸ್ರೋ ಸಾಧನೆಯನ್ನು ಸಂಭ್ರಮಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಡಿಸಿದರು.
ಪ್ರಧಾನಿ ಮೋದಿಯವರ ಅವಧಿಯಲ್ಲಿ ಈ ಸಾಧನೆಯನ್ನು ಇಸ್ರೋ ಮಾಡಿದೆ ಹೀಗಾಗಿ ಇದರ ಕ್ರೆಡಿಟ್ ಮೋದಿಯವರಿಗೆ ಸಲ್ಲಬೇಕು ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.