ಮಂಡ್ಯ: ರೈತರ ವಿಚಾರದಲ್ಲಿ ಯಾವುದೇ ಸರ್ಕಾರವನ್ನಾಗಲಿ ಪ್ರಶ್ನೆ ಮಾಡಲೇಬೇಕಾಗುತ್ತದೆ, ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು, ಗಮನ ಸೆಳೆಯುವುದು ನಾವು ಮಾಡ್ತೇವೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಕೆ.ಆರ್.ಎಸ್ ಮುಂಭಾಗ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶಿಸಿದರು. ಈ ವೇಳೆ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಇದರಲ್ಲಿ ಯಾವುದೇ ಗೊಂದಲ ಇಲ್ಲ, ರೈತರ ಹಿತ ಕಾಪಾಡುವುದು ರೈತ ಸಂಘದ ಕೆಲಸ ಅದನ್ನ ಮಾಡ್ತಿದ್ದೀನಿ, ನಮ್ಮ ರಾಜಕೀಯ ನಿಲುವುಗಳೇ ಬೇರೆ ನಮ್ಮ ಹೋರಾಟಗಳೇ ಬೇರೆ, ಚುನಾವಣೆ ಸಂದರ್ಭದಲ್ಲಿ ಅವರು ಬೆಂಬಲ ನೀಡಿದ್ರೂ, ಈಗಾಗಿ ನಾನು ಅವರಿಗೆ ಬೆಂಬಲ ನೀಡ್ತಿದ್ದೀನಿ, ಆದ್ರೆ ರೈತರ ವಿಚಾರದಲ್ಲಿ ಹಾಗಲ್ಲ ಎಂದರು.
ಇದನ್ನೂ ಓದಿ : ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ! ಬಿ ಎಲ್ ಸಂತೋಷ್ ಸಭೆಗೆ ಹಲವರು ಗೈರು
ಪ್ರಸ್ತುತ ಮಂಡ್ಯದ ಕಾಂಗ್ರೆಸ್ ಶಾಸಕರೇ ಇದರ ಬಗ್ಗೆ ಧ್ವನಿ ಎತ್ತಿದ್ದಾರೆ, ನಮ್ಮ ಆಲೋಚನೆಗಳಲ್ಲಿ ಯಾವುದೇ ಗೊಂದಲ ಇಲ್ಲ, ಕಾಂಗ್ರೆಸ್ ನಲ್ಲೂ ಗೊಂದಲ ಇಲ್ಲ, ನಮ್ಮಲ್ಲೂ ಇಲ್ಲ, ನಿನ್ನೆ ಸಿಎಂ ಹಾಗೂ ಡಿಕೆ ಶಿವಕುಮಾರ್ ಅವರ ಜೊತೆ ಮಾತ್ನಾಡಿದ್ದೀವಿ, ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಇದೆ, ನಾಳಿನ ಸುಪ್ರಿಂ ಕೋರ್ಟ್ ವಿಚಾರಣೆ ಬಗ್ಗೆ ಸಾಕಷ್ಟು ಕುತೂಹಲ ಇದೆ, ಸರ್ಕಾರ ಸುಪ್ರೀಂ ಮುಂದೆ ಯಾವ ರೀತಿ ಪ್ರಸ್ತುತ ಪಡಿಸುತ್ತೆ ನೋಡಬೇಕು, ಸದ್ಯಕ್ಕೆ ನಾವು ರಕ್ಷಣಾತ್ಮಕವಾಗಿ ಇದ್ದೇವೆ, ಕೋರ್ಟ್‌ನ ನಡೆ ಏನು ಎಂಬುದು ನಾಳೆ ಗೊತ್ತಾಗುತ್ತೆ, ಅಡ್ವಕೇಟ್ ಜನರಲ್ ಮೇಲೆ ವಿಶ್ವಾಸ ಇದೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.