Friday, September 29, 2023
spot_img
- Advertisement -spot_img

‘ ಈ ಸರ್ಕಾರದಲ್ಲಿ ಮಹಾತ್ಮರ ಪ್ರತಿಮೆಗಳಿಗೆ ರಕ್ಷಣೆ ಇಲ್ಲದಿರುವುದು ವಿಷಾದನೀಯ!’

ಶಿವಮೊಗ್ಗ : ಹೊಳೆಹೊನ್ನೂರಲ್ಲಿ ಗಾಂಧಿ ಪ್ರತಿಮೆ ಧ್ವಂಸ ಹಿನ್ನೆಲೆ, ಬಿಜೆಪಿ ಯುವ ಮೋರ್ಚಾದಿಂದ ಸದ್ಭಾವನಾ ಯಾತ್ರೆಯನ್ನು ಆಯೋಜಿಸಲಾಗಿದೆ. ನಗರದ ಗಾಂಧಿ ಪಾರ್ಕ್‌ನಿಂದ ಹೊಳೆಹೊನ್ನೂರು ಗ್ರಾಮದವರೆಗಿನ ಪಾದಯಾತ್ರೆಗೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆಗೂ ಹಾಗೂ ಮಹಾತ್ಮಾ ಗಾಂಧಿಯವರಿಗು ನಂಟಿದೆ ಎಂದು ಸ್ಮರಿಸಿದರು. 1927ರಲ್ಲಿ ಅವರು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಲು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದರು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾವಣೆಯ ಬಳಿಕ ನಡೆದ ದುಷ್ಕ್ರತ್ಯವನ್ನು ಖಂಡಿಸಿ ಸದ್ಭಾವನಾ ಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಈ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು. ಪ್ರತಿಮೆಯನ್ನು ರಕ್ಷಿಸದ ಸರ್ಕಾರದ ವಿರುದ್ಧ ಕಿಡಿಕಾರಿದರು. ರಾಜಕಾರಣದಲ್ಲಿ ಪರ ವಿರೋಧಗಳು ಹಾಗೂ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಸಹಜವಾಗಿರುತ್ತೇವೆ. ಸಾರ್ವಜನಿಕ ಜೀವನದಲ್ಲಿರುವ ಎಲ್ಲರೂ ಅದನ್ನು ಮೀರಿ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕೆಂದು ಪ್ರತಿಪಾದಿಸಿದರು. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಮಹಾತ್ಮರ ಪ್ರತಿಮೆಗಳನ್ನು ರಕ್ಷಣೆ ಮಾಡಲು ಮುಂದಾಗಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ : ಜಯನಗರ : ಮತ ಎಣಿಕೆ ವಿವಾದ ಕೋರ್ಟ್ ಮೊರೆಹೋದ ಸೌಮ್ಯ ರೆಡ್ಡಿ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles