Sunday, September 24, 2023
spot_img
- Advertisement -spot_img

ಸಂವಿಧಾನ-ಪ್ರಜಾಪ್ರಭುತ್ವದ ರಕ್ಷಣೆ ನಮ್ಮ ಜವಾಬ್ದಾರಿ: ಮಲ್ಲಿಕಾರ್ಜುನ ಖರ್ಗೆ

ಹೈದರಾಬಾದ್ : ಬಿಜೆಪಿಯ ಜನವಿರೋಧಿ ನೀತಿಗಳನ್ನು ಬಯಲಿಗೆಳೆದು, ಮೂಲಭೂತ ಸಮಸ್ಯೆಗಳ ಬಗ್ಗೆ ಜನರಿಗೆ ನಿರಂತರವಾಗಿ ಅರಿವು ಮೂಡಿಸಿ ಎಂದು ತೆಲಂಗಾಣದಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದಾರೆ.

ತೆಲಂಗಾಣ ರಾಜಧಾನಿಯಲ್ಲಿ ನಡೆದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಪಕ್ಷದ ಸಿದ್ಧಾಂತ ಹಾಗೂ ಧ್ಯೇಯದ ಬಗ್ಗೆ ಬೋಧಿಸಿದ ಅವರು, ಕಾಂಗ್ರೆಸ್ ಪಕ್ಷವು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಡಿಪಾಯವನ್ನು ಹಾಕಿ ಕೊಟ್ಟಿದೆ ಮತ್ತು ಅದನ್ನು ರಕ್ಷಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. 2024 ರಲ್ಲಿ ಮಹಾತ್ಮ ಗಾಂಧಿಯವರ ಶತಮಾನೋತ್ಸವವನ್ನು ಆಚರಿಸಲಿದ್ದೇವೆ, ಹೀಗಾಗಿ ಮುಂದಿನ ವರ್ಷ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ತೆಗೆದುಹಾಕುವುದು ಅವರಿಗೆ ನಾವು ನೀಡುವ “ನಿಜವಾದ ಗೌರವ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿಸಿ ಸಂಭ್ರಮಿಸೋಣ: ಸಿಎಂ ಸಿದ್ದರಾಮಯ್ಯ

ದೇಶವು ಬದಲಾವಣೆಯನ್ನು ಬಯಸುತ್ತಿದೆ ಎಂದ ಅವರು, ಅದರ ಎಲ್ಲ ಆಧಾರಗಳು ಕೂಡ ನಮ್ಮ ಮುಂದಿದೆ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಮ್ಮ ಗೆಲುವೇ ಇದಕ್ಕೆ ಸಾಕ್ಷಿ. ಸುಮ್ಮನೆ ಕೂರುವ ಸಮಯ ಇದಲ್ಲ, ಗುರಿಮುಟ್ಟಲು ಹಗಲಿರುಳು ಶ್ರಮಿಸಬೇಕಾಗುತ್ತದೆ. ಮತ್ತು ಪಕ್ಷಕ್ಕೆ ನಷ್ಟವಾಗಬಹುದು ಎಂಬ ಅಹಂಕಾರಕ್ಕಾಗಿ ಅಥವಾ ಚಪ್ಪಾಳೆಗಾಗಿ ನಾವು ಏನನ್ನೂ ಮಾಡಬಾರದು, ಶಿಸ್ತು ಇಲ್ಲದೆ ಯಾರೂ ನಾಯಕರಾಗುವುದಿಲ್ಲ. ನಾವು ಶಿಸ್ತುಬದ್ಧರಾಗಿ ಇದ್ದರೆ ಮಾತ್ರ ಜನರು ನಮ್ಮನ್ನು ಅನುಸರಿಸುತ್ತಾರೆ ಮತ್ತು ನಮ್ಮ ಮಾತನ್ನು ಕೇಳುತ್ತಾರೆ ಎಂದರು.

ಇದನ್ನೂ ಓದಿ : ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಿಸುವುದೆ ನಮ್ಮ ಅಜೆಂಡಾ : ಡಿಕೆಶಿ

ಸಭೆಯಲ್ಲಿ ಏಕತೆಯ ಮಂತ್ರವನ್ನು ಘೋಷಿಸಿದ ಅವರು, ನಮ್ಮ ಸಭೆಯ ಸಂದೇಶಕ್ಕಾಗಿ ದೇಶ ಕಾಯುತ್ತಿದೆ. 138 ವರ್ಷಗಳ ಅಸ್ತಿತ್ವದಲ್ಲಿ ಪಕ್ಷವು ಹೇಗೆ ಅನೇಕ ಸವಾಲುಗಳನ್ನು ಗೆದ್ದಿದೆ ಎಂಬುದನ್ನು “ನಾವು ಕರ್ನಾಟಕದ ಫಲಿತಾಂಶದಲ್ಲಿ ಎಲ್ಲರೂ ನೋಡಿದ್ದೇವೆ” ಎಂದು ಸಭೆಗೆ ಉತ್ಸಾಹ ತುಂಬಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles