ಬಾಗಲಕೋಟೆ : ಸರ್ಕಾರ ಟೇಕಾಫ್ ಆಗಲು ಇನ್ನು ಮೂರೂ ತಿಂಗಳು ಕಾಯಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ಧಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ, ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನಗಳನ್ನಾದರೂ ನಾವು ಗೆಲ್ಲಲೇಬೇಕು. ಅಷ್ಟು ಗೆದ್ದರೆ ಮಾತ್ರ ನಮ್ಮ ಯೋಜನೆಗಳು, ಹಾಗೂ ಸಾಮರ್ಥ್ಯ ಗೆದ್ದ ಹಾಗೆ ಇಲ್ಲದಿದ್ದರೆ ತುಂಬ ಕಷ್ಟ. ಸರ್ಕಾರದಲ್ಲಿ ಅಸಮಾಧಾನವಿದೆ ಅದನ್ನು ಬಗೆ ಹರಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಇದ್ದಾರೆ. ನಮ್ಮ ಸರ್ಕಾರ ಇನ್ನು 6 ತಿಂಗಳು ಪೂರೈಸಿಲ್ಲ, ಮೂರು ತಿಂಗಳಲ್ಲಿ ಯಾವುದೇ ಸರ್ಕಾರ ಟೇಕ್ ಆಫ್ ಆಗಲ್ಲ ಟೇಕಾಫ್ ಆಗೋಕೆ ಕನಿಷ್ಠ ಆರು ತಿಂಗಳಾದರೂ ಬೇಕು ಎಂದಿದ್ದಾರೆ.
ಇದನ್ನೂ ಓದಿ : ‘ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯಲು ಸರ್ಕಾರ ಬದ್ಧ’
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಜನ ಸೇರುತ್ತಾರೆ ಎಂಬ ಬಗ್ಗೆ ಮಾತನಾಡಿದ ಅವರು, ನಾವು ಸ್ಪರ್ಧೆ ಮಾಡ್ತೀವಿ ಅಂತಾ ಜಿಲ್ಲಾಧ್ಯಕ್ಷರಿಗೆ ಕಾಂಟ್ಯಾಕ್ಟ್ ಅರ್ಜಿ ಕೊಡಬೇಕು. ನಂತರ ನಾಯಕರು, ಅಧ್ಯಕ್ಷರು ಇದನ್ನ ತೀರ್ಮಾನ ಮಾಡ್ತಾರೆ. ತೀರ್ಮಾನ ಪ್ರಕಾರ ನಾವು ಸೀಟು ಘೋಷಣೆ ಮಾಡ್ತೀವಿ. ಬೆಂಗಳೂರು ಕಾರ್ಪೋರೇಟರ್ ಗಳು ಬಹಳ ಜನ ಪಕ್ಷ ಸೇರ್ತಿದ್ದಾರೆ. ನಮ್ಮ ಪಕ್ಷ, ಸಿದ್ದಾಂತ ಒಪ್ಪಿಕೊಂಡರೆ ಪಕ್ಷದೊಳಗೆ ಸೇರಿಸಿಕೊಳ್ತಿವಿ. ಬಿಜೆಪಿ ಬಿಟ್ಟು ತುಂಬ ಜನ ಕಾಂಗ್ರೆಸ್ ಸೇರ್ತಿದಾರೆ ಯಾರೇ ಸೇರಿದರು ಅವರಿಗೆ ಮುಕ್ತವಾದ ಅವಕಾಶ ಇದೆ ಎಂದು ಹೇಳಿದರು.
ಇದನ್ನೂ ಓದಿ : ‘ನಮ್ಮ ದುಡ್ಡಿನಲ್ಲಿ ಡ್ಯಾಂ ಕಟ್ಟಿದ್ದು ತಮಿಳುನಾಡಿಗೆ ನೀರು ಬಿಡೋಕಾ’
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.