ಹುಬ್ಬಳ್ಳಿ: ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ, ಬಹಳಜನರಿಗೆ ಆಶ್ಚರ್ಯವಾಗಿದೆ, ನಾನು ಪಕ್ಷ ಬೆಳೆಸಲು ಶ್ರಮಿಸುತ್ತೇನೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಬೆಳೆಸಿದ ವ್ಯಕ್ತಿ ನಾನು, ಆದ್ರೆ ಅಲ್ಲಿ ಕೆಲ ದಿನಗಳಿಂದ ಗೌರವ ಇರಲಿಲ್ಲ, ಪಕ್ಷಕ್ಕೆ ಉತ್ತಮ ಸ್ಥಾನ ಮಾನ ನೀಡಿದ್ದೆ ಎಂದು ತಿಳಿಸಿದರು. ರಾಷ್ಟ್ರೀಯ ರಾಜಕೀಯದಲ್ಲಿ ಅವಕಾಶ ಕೊಡ್ತೇವೆ ಎಂದಿದ್ದರು, ಟಿಕೆಟ್ ಕೊಡದ್ದಕ್ಕೆ ಅಸಾಮಾಧಾನವಿತ್ತು, ಅವರ ಆಫರ್ ನ್ನು ತಿರಸ್ಕರಿಸಿದೆ ಎಂದರು. ಕ್ರೀಯಾಶೀಲವಾಗಿದ್ದ ನನಗೆ ಯಾಕೆ ಪಕ್ಷ ಕಡೆಗಣಿಸಿತು ಎಂದು ಅರಿವಾಗುತ್ತಿಲ್ಲ, ನನಗೆ ಅಧಿಕಾರ ಬೇಕಿರಲಿಲ್ಲ, ಆದ್ರೆ ನಾಮಪತ್ರ ಸಲ್ಲಿಕೆ ಕಡೆ ಕ್ಷಣ ಸಮೀಪಿಸುತ್ತಿರುವಾಗ ಟಿಕೆಟ್ ಇಲ್ಲ ಎಂದರು ಎಂದು ಬೇಸರಿಸಿದರು.
ಚುನಾವಣಾ ರಾಜಕೀಯದಿಂದ ಹೊರಬನ್ನಿ ಎಂಬ ಮಾಹಿತಿ ಮೊದಲೇ ಹೇಳಬಹುದಿತ್ತು, ಆದ್ರೆ ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ ಎಂದು ಅಸಾಮಾಧಾನ ಪಟ್ಟರು. ಬಿಜೆಪಿಯವರು ನಡೆದುಕೊಂಡ ರೀತಿ ಸರಿ ಎನ್ನಿಸಲಿಲ್ಲ, ನನ್ನನ್ನು ಸಮಾಧಾನ ಮಾಡೋ ಪ್ರಯತ್ನ ನಡೆದವು ಆದ್ರೆ ನನಗೆ ಇಷ್ಟ ಆಗಲಿಲ್ಲ ಎಂದು ತಿಳಿಸಿದರು.
ಇನ್ನೂ ಡಿಕೆಶಿವಕುಮಾರ್ ರವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿರೋ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಇದೊಂದು ಮಹತ್ವದ ದಿನ. ಕಾಂಗ್ರೆಸ್ ತತ್ವ, ಸಿದ್ಧಾಂತಗಳ ಮೇಲೆ ನಂಬಿಕೆಯಿಟ್ಟು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ ವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಗೊಂಡರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದೆ ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.